ಕಾಲೇಜು ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಮುಖ್ಯ – ಫ್ರೋ ಬಾಬು

ದಾವಣಗೆರೆ: ಕಾಲೇಜಿನಿಂದ ಪದವಿ ಪಡೆದು ಹೊರ ಹೋಗಿ ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಕಾಲೇಜು ಅಭಿವೃದ್ಧಿಯಲ್ಲಿ ಹಾಗೂ ಪ್ರಸ್ತುತ ವಿದ್ಯಾರ್ಥಿಗಳ ಭವಿಷ್ಯ. ರೂಪಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್ ಬಾಬು ರವರು ಹೇಳಿದರು.
ಅವರು ಇಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರು ಕಾಲೇಜಿಂದ ಹೊರಹೋದ ನಂತರ ಸಾಮಾಜಿಕವಾಗಿ ಬೆಳವಣಿಗೆಯಾಗುತ್ತಾರೆ ಆ ಬೆಳವಣಿಗೆ ನಂತರ ಸಾಮಾಜಿಕ ಹೊಣೆಗಾರಿಕೆ ನಮ್ಮದು ಎಂಬ ಧನಾತ್ಮಕ ಚಿಂತನೆಯಿಂದ ಕಾಲೇಜಿನ ಅಭಿವೃದ್ಧಿ ಕಡೆಗೆ ಮುಖ ಮಾಡಿದರೆ ಕಾಲೇಜುಗಳು ಅಭಿವೃದ್ಧಿಯಾಗಲು ಸಾಧ್ಯ. ಪ್ರತಿಯೊಬ್ಬರು ದೇಶಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎನ್ನುವುದನ್ನು ಅರ್ಥೈಸಿಕೊಂಡು ದೇಶಕ್ಕೆ ಕೊಡುಗೆಯ ರೂಪದಲ್ಲಿ ಕಾಲೇಜಿನ ಅಭಿವೃದ್ಧಿಯತ್ತ ಗಮನ ಹರಿಸಿದರೆ ಕಾಲೆಜುಗಳು ವೃದ್ಧಿಯಾಗಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಆಲೋಚಿಸುವ ಅಗತ್ಯ ಇದೆ ಎಂದು ಹೇಳಿದರು.
ಪದವಿ ಪಡೆದ ನಂತರ ನಮಗೆ ಯಾರಾದರೂ ಸಹಾಯ ಮಾಡುತ್ತಾರೆ ಯಾರಿಂದಲಾದರೂ ನಾವು ಮೇಲೆ ಬರುತ್ತೇವೆ ಎಂಬ ಕಲ್ಪನೆಯಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೇ ನಮಗೆ ನಾವೇ ಗುರುಗಳಾಗಿ ಜೀವನನ್ನು ರೂಪಿಸುವಲ್ಲಿ ತಲ್ಲಿನರಾಗಬೇಕು ಜೀವನ ರೂಪಗೊಂಡ ನಂತರ ನಾವು ಓದಿದ ಕಾಲೇಜಿಗೆ ಮತ್ತು ಅಲ್ಲಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದಾಗ ಕಾಲೇಜುಗಳು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಹಳೆ ವಿದ್ಯಾರ್ಥಿಗಳ ಜೊತೆಗೆ ಪ್ರಸ್ತುತ ವಿದ್ಯಾರ್ಥಿಗಳು ಜೊತೆಗೂಡಿದರೆ ಇನ್ನಷ್ಟು ಉತ್ತಮವಾದ ಕಾರ್ಯಗಳನ್ನು ಮಾಡಿ ಸರ್ಕಾರಿ ಮಹಿಳಾ ಕಾಲೇಜನ್ನು ಮಾದರಿ ಕಾಲೆಜನ್ನಾಗಿ ರೂಪಿಸಬಹುದು ಎಂದು ಅಭಿಪ್ರಾಯಪಟ್ಟರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಕರಿಬಸಪ್ಪನವರು ಮಾತನಾಡುತ್ತಾ ತಾನು ಓದಿದ ಶಾಲೆಗೆ ತಾವು ದುಡಿದ ನಂತರ ಕೊಡುಗೆ ನೀಡಿದಾಗ ಅದು ಸಾರ್ಥಕ ಜೀವನವಾಗುತ್ತದೆ ಎಂದು ಹೇಳಿದರು. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ ಶಿವರಾಜ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಉತ್ತಮ ಕಾರ್ಯಗಳನ್ನು ಮಾಡಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ ಶೈಲಜಾ ಅವರು ಮಾತನಾಡುತ್ತಾ ಹಳೆ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳ ಜೊತೆ ಸೇರಿದಾಗ ಉತ್ತಮ ರೀತಿಯಲ್ಲಿ ಉತ್ತಮ ಆಲೋಚನೆ ಬರ್ತವೆ ಹಾಗೆ ತಮ್ಮ ಅನುಭವಗಳನ್ನು ಪಸರಿಸಿದಾಗ ಅವರಿಗೂ ಕೂಡ ಪ್ರೋತ್ಸಾಹವಾಗುತ್ತದೆ. ಹಳೆ ವಿದ್ಯಾರ್ಥಿಗಳ ಸಂಘದಿಂದ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಿದರು ಕಾಲೇಜು ಸದಾ ಬೆಂಬಲವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ಅನುರಾಧ ಜಿಎಸ್ ಕನ್ನಡ ಭಾಗದ ಕಾವ್ಯಶ್ರೀರವರು ಅಧೀಕ್ಷಕರಾದ ಶೇಷಪ್ಪನವರು ಹಳೆ ವಿದ್ಯಾರ್ಥಿಗಳಾದ ನಾಗಮಣಿ ಹಾಗೂ ಕಾವ್ಯ ರವರು ಉಪಸ್ಥಿತರಿದ್ದರು.