ಸೆಪ್ಟೆಂಬರ್ 6 ರಿಂದ ಶಾಲೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್: ದಿನ ಬಿಟ್ಟು ದಿನ ಶಾಲೆ
![IMG-20210830-WA0009](https://garudavoice.com/wp-content/uploads/2021/08/IMG-20210830-WA0009.jpg)
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಹಾಗೂ ತಜ್ಞರೊಂದಿಗೆ ನಡೆದ ಸಭೆಯನಂತರ ಕಂದಾಯ ಸಚಿವರಾದ ಆರ್. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಸೋಮವಾರ ದಿಂದ ಶುಕ್ರವಾರ ದವರೆಗೆ ದಿನಬಿಟ್ಟು ದಿನದಂತೆ ಶೇಕಡಾ 50 ಪರ್ಸೆಂಟ್ 2 ಬ್ಯಾಚುಗಳಲ್ಲಿ ಶಾಲೆಗಳನ್ನು ಆರಂಭ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
6ನೇ ತರಗತಿ 7ನೇ ತರಗತಿ 8ನೇ ತರಗತಿ ಗಳನ್ನು ವಾರದ ಐದು ದಿನಗಳು ಶಾಲೆ ನಡೆಸಿ ಉಳಿದ ಎರಡು ದಿನ ಶನಿವಾರ ಮತ್ತು ಭಾನುವಾರ ಶಾಲೆಗಳಿಗೆ ಸ್ಯಾನಿಟೈಜ್ ಮಾಡಲಾಗುವುದು.
ಯಾವ ಜಿಲ್ಲೆಯಲ್ಲಿ ಕೋವಿಡ್19 ಪಾಸಿಟಿವಿಟಿ ಶೇಕಡಾ 2% ಇದಿಯೋ ಆ ಜಿಲ್ಲೆಗಳಲ್ಲಿ ತರಗತಿಗಳನ್ನು ಆರಂಬಿಸಲು ನಿರ್ಧಾರಸಲಾಗಿದೆ ಎಂದು ಕಂದಾಯಸಚಿವರಾದ ಆರ್. ಅಶೋಕ್ ಹೇಳಿದರು.
ಗಣೇಶೋತ್ಸವದ ಅಂಗವಾಗಿ ತಜ್ಞರೊಂದಿಗೆ ಚರ್ಚಿಸಿ ಸೆಪ್ಟಂಬರ್ 5ರಂದು ಎಲ್ಲಾ ಜಿಲ್ಲಾ ಕೇಂದ್ರದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮುಖಂಡರೊಂದಿಗೆ ಚರ್ಚಿಸಿ ಕೋವಿಡ್ ನಿಯಮಾವಳಿಗಳ ಪ್ರಕಾರ ಗಣೇಶೋತ್ಸವಕ್ಕೆ ಪೂರಕಅನುವು ಮಾಡಿಕೊಡುವ ಬಗ್ಗೆ ತಿಳಿಸಲಾಗುವುದು ಎಂದರು