92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು

ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ಅಂದ್ರೆ ಸಾಕು ಇಡೀ ರಾಜ್ಯ ಅವರತ್ತ ನೋಡುತ್ತದೆ.. ವಯಸ್ಸು ಜಸ್ಟ್ 92 ಆದರೆ ಚಿರೋತ್ಸಾಹ ಮಾತ್ರ 22 ಆಗಿದ್ದು, 5 ಬಾರಿ ಶಾಸಕರು ಒಂದು ಭಾರಿ ಸಂಸದರಾಗಿ‌ ಇದೀಗ ಆರನೇ ಬಾರಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸ್ಫರ್ಧಿಸಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು
ಶಾಮನೂರು ಶಿವಶಂಕರಪ್ಪ ಇಳಿ ವಯಸ್ಸಿನಲ್ಲಿಯೂ ಬೆಳ್ಳಂ ಬೆಳಗ್ಗೆ ಪ್ರಚಾರಕ್ಕೆ ಹೋಗುವ ಶಾಸಕರು ದೈನಂದಿನ ಕೆಲಸದ ನಡುವೆ ಮತಪ್ರಚಾರಕ್ಕೆ ಹೋಗುತ್ತಿದ್ದಾರೆ. ಈ ನಡುವೆ ಶಾಮನೂರು ಮನೆಯಲ್ಲಿನ ಸೊಸೆ ಹಾಗೂ ಮೊಮ್ಮಗನ ಪತ್ನಿ ಇಡೀ ದಾವಣಗೆರೆ ಸುತ್ತುತ್ತಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು
ಶಾಸಕ ಶಾಮನೂರು ಶಿವಶಂಕರಪ್ಪ ನವರಿಗೆ ಮೂವರು ಪುತ್ರರಿದ್ದು, ಎಸ್‌ಎಸ್ ಗಣೇಶ್, ಎಸ್‌ಎಸ್ ಮಲ್ಲಿಕಾರ್ಜುನ್, ಎಸ್‌ಎಸ್ ಬಕ್ಕೇಶ್ ಇವರ ಪತ್ನಿಯರು ಮಾವನನ್ನು ಗೆಲ್ಲಿಸಲು ಇಡೀ ಕ್ಷೇತ್ರದ್ಯಾಂತ ಓಡಾಡುತ್ತಿದ್ದಾರೆ. ಉತ್ತರದಿಂದ ಎಸ್.ಎಸ್.ಮಲ್ಲಿಕಾರ್ಜುನ್, ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಸ್ಫರ್ಧೆ ಮಾಡಿದ್ದು, ಸೊಸೆಯಂದಿರು ಬಿಸಿಲಿನಲ್ಲಿಯೇ ಮಾವನ ಪರ ಪ್ರಚಾರ ಮಾಡುತ್ತಿದ್ದಾರೆ.
ಎಸ್‌ಎಸ್‌ಗಣೇಶ್ ಪತ್ನಿ ರೇಖಾ ಗಣೇಶ್, ಎಸ್‌ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಎಸ್‌ಎಸ್‌ಗಣೇಶ್ ಸೊಸೆ ಸ್ವಾತಿ ಅಭಿಜಿತ್, ಕೂಡು ಕುಟುಂಬ ಫೀಲ್ಡಿಗೆ ಎಂಟ್ರಿ ಹೊಡೆದಿದೆ. ಅಲ್ಲದೇ ಹಳ್ಳಿ-ಹಳ್ಳಿಗೆ ಹೋಗಿ ಶಾಮನೂರು ಶಿವಶಂಕರಪ್ಪ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಹೇಳುತ್ತಿದ್ದಾರೆ. ಅಲ್ಲದೇ ಸಮಸ್ಯೆಗಳನ್ನು ಕೇಳಿ ಅವುಗಳ ಪರಿಹಾರಕ್ಕೆ ವಿರಾಮ ಹಾಕುತ್ತಿದ್ದಾರೆ.
ದಿನ ಕಳೆದಂತೆ, ಬೆಣ್ಣೆ ನಗರಿ ಚುನಾವಣಾ ಅಖಾಡ ರಂಗೇರುತ್ತಿದ್ದು, ಎದುರಾಳಿಗಳಿಗೆ ಮೂವರು ಸೊಸೆಯರು ಠಕ್ಕರ್‌ ಕೊಡುತ್ತಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಆರು ಲಕ್ಷ ಮಹಿಳಾ ಮತದಾರರು ಇದ್ದು, ಮಹಿಳೆಯರ ಸಂಖ್ಯೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸೊಸೆಯಂದಿರು ಮಹಿಳಾ ಮಣಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು
ಸ್ತ್ರೀ ಶಕ್ತಿ, ಸ್ವಸಹಾಯ ಗುಂಪುಗಳನ್ನು ಕೇಂದ್ರಿಕೃತ ಮಾಡಿರುವ ಈ ತಂಡ ಹಳ್ಳಿಗಳಲ್ಲಿ ದೊಡ್ಡ ಮಟ್ಟದ ಮಹಿಳಾ ಸಭೆ ನಡೆಸುತ್ತಿದ್ದಾರೆ. ಅದರಲ್ಲೂ ಈಗಿನ ಕುಡಿ ಸ್ವಾತಿ ಅಭಿಜಿತ್ ತಾತನ ಪರ ಸಖತ್ ಮಾತುಗಳನ್ನಾಡುತ್ತಿದ್ದಾರೆ. ಶಾಮನೂರು ಏನು ಮಾಡಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿದೆ. ಕೊರೊನಾ ಕಾಲದಲ್ಲಿ 6 ಕೋಟಿ ಮೌಲ್ಯದ ವ್ಯಾಕ್ಸಿನ್‌ನ್ನು ತಂದು ಸರಕಾರ ನೀಡುವ ಮೊದಲೇ ಕೊಟ್ಟು ಜನರ ಜೀವ ಉಳಿಸಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು
ಆ್ಯಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದಾಗ ಬಡವರಿಗೆ ಉಚಿತ ಸೇವೆ ನೀಡಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ನಾವಿದ್ದೇವೆ ಎಂದು ಶಾಮನೂರು ಶಿವಶಂಕರಪ್ಪ ಪರ ಬ್ಯಾಟಿಂಗ್ ಬೀಸುತ್ತಿದ್ದಾರೆ.
ಪ್ರಭಾ ಮಲ್ಲಿಕಾರ್ಜುನ್ ಮಾವ ಶಾಮನೂರು ಶಿವಶಂಕರಪ್ಪ, ಪತಿ ಎಸ್‌ಎಸ್ ಮಲ್ಲಿಕಾರ್ಜುನ್ ಗೆಲ್ಲಿಸುವ ಹೊಣೆ ಹೊತ್ತಿದ್ದು, ಪ್ರಚಾರ ಅದ್ದೂರಿಯಾಗಿದೆ. ನಮ್ಮ ಟ್ರಸ್ಟ್‌ನಿಂದ ಬಡವರಿಗೆ ಮೂರು ಸೇವೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ನೀವು ಕೆ ಆರ್ ರಸ್ತೆಯಲ್ಲಿರುವ ಎಸ್‌ಎಸ್ ಜನರಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್, ಕಣ್ಣಿನ ಪೊರೆ, ಹೆರಿಗೆ ಸೇವೆಯನ್ನು ಉಚಿತವಾಗಿ ಪಡೆಯಬಹುದು ಎಂದು ಹೇಳುವ ಮೂಲಕ ಮಹಿಳೆಯರ ಮನದಾಳಕ್ಕೆ ಕೈ ಹಾಕಿದ್ದಾರೆ. ಇನ್ನು ಮಾವನವರಿಗೆ 92 ವರ್ಷ, ನನಗೆ ಅವರ ಅರ್ಧದಷ್ಟು ವಯಸ್ಸಾಗಿಲ್ಲ. ಅವರ ಅನುಭವ ದಾವಣಗೆರೆಗೆ ಬೇಕಿದೆ. ಸುಮಾರು 25 ವರ್ಷಗಳ ಕಾಲ ಸೇವೆ ನೀಡಿದ್ದಾರೆ. ಇದು ಅವರಿಗೆ ಆರನೇ ಚುನಾವಣೆ ಗೆಲ್ಲಿಸಿ ಎಂದು ಹೇಳುತ್ತಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು
ಎಸ್‌ಎಸ್ ಗಣೇಶ್ ಪತ್ನಿ ರೇಖಾ ಗಣೇಶ್ ಕೂಡ ಡೋರ್ ಟು ಡೋರ್ ಕ್ಯಾಂಪೇನ್ ಮಾಡುತ್ತಿದ್ದಾರೆ. ಅಲ್ಲಿ ದಾವಣಗೆರೆಗೆ ಶಾಮನೂರು ಕೊಡುಗೆ ಏನು ಎಂದು ವಿವರಣೆ ನೀಡುತ್ತಿದ್ದಾರೆ. ಒಟ್ಟಾರೆ ಸದಾ ಎಸಿಯಲ್ಲಿದ್ದ ಸೊಸೆಯಂದಿರು ಮಾವನ ಗೆಲುವಿಗಾಗಿ ಸುಡುವ ಬಿಸಿಲಿನಲ್ಲಿ ಕ್ಯಾಂಪೇನ್ ಮಾಡುತ್ತಿದ್ದು, ಎದುರಾಳಿಗೆ ಠಕ್ಕರ್ ಕೊಡುತ್ತಿದ್ದಾರೆ.

92 ವರ್ಷದ ಮಾವನ ಗೆಲ್ಲಿಸಲು ಅಖಾಡಕ್ಕೆ ಇಳಿದ ಮಹಿಳಾ ಮಣಿಗಳು ಎದುರಾಳಿಗೆ ಠಕ್ಕರ್ ನೀಡುವ ಶಾಮನೂರು ಸೊಸೆಯಂದಿರು

Leave a Reply

Your email address will not be published. Required fields are marked *

error: Content is protected !!