ಬಸಾಪುರದ ಸರ್ಕಾರಿ ಶಾಲೆಯಲ್ಲಿ ಶಾರದಾ ಪೂಜೆ : ವಿದ್ಯಾರ್ಥಿನಿಯರಿಗೆ ಸನ್ಮಾನ
ದಾವಣಗೆರೆ : ಬಸಾಪುರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಡಗರದಿಂದ ಶಾರದಾ ಪೂಜೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಲ್ಲಿ ದೇಶದ ಬಗ್ಗೆ ಅರಿವು ಮೂಡಿಸಲು ಭಾರತದ ಸ್ವತಂತ್ರದ 75 ವರ್ಷಗಳ ಸಂಭ್ರಮಾಚರಣೆಯ “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದಡಿಯಲ್ಲಿ ತಾಲೂಕು ಜಿಲ್ಲಾ ವಿಭಾಗ ಹಾಗೂ ರಾಜ್ಯಮಟ್ಟದಲ್ಲಿ ಆನ್ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾದಂತಹ ಶಾಲೆಯ ವಿದ್ಯಾರ್ಥಿಗಳಾದ ನೀಲಾಂಬರಿ, ಚೈತ್ರ, ಭಾಗ್ಯ ಲಕ್ಷ್ಮಿಯವರಿಗೆ ಗ್ರಾಮದ ಮುಖಂಡರಾದ ಎಂ.ಎಸ್. ಕೊಟ್ರಯ್ಯ ಶಾಲು ಹೊದಿಸಿ ಸನ್ಮಾನಿಸಿದರು. ಕೆ.ಎಲ್. ಹರೀಶ್ ಬಸಾಪುರ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಈ ವೇಳೆ ಆನೆಕೊಂಡ ಕ್ಲಸ್ಟರ್ ಸಿಆರ್‌ಪಿ ಶೌಕತ್ ಅಲಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ನಾಗವೇಣಿ, ಪ್ರಭಾರಿ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಶಾಲಾ ಶಿಕ್ಷಕರು, ಸಿಬ್ಬಂದಿಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿಗಳು ತಮ್ಮ ಈ ಸಾಧನೆಗೆ ಕಾರಣರಾದ ಶಿಕ್ಷಕ ರವಿಕುಮಾರ್ ಹಾಗೂ ಎಲ್ಲಾ ಶಿಕ್ಷಕ ವರ್ಗದವರಿಗೆ ಧನ್ಯವಾದ ತಿಳಿಸಿದರು.