ಮುಜರಾಯಿ ದೇವಸ್ಥಾನದಲ್ಲಿ ನವಂಬರ್ 5 ರಂದು ಗೋ ಪೂಜೆ ಮಾಡಲು ಆದೇಶ
ಬೆಂಗಳೂರು: ಮುಜರಾಯಿ ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ನವೆಂಬರ್ 5ರಂದು ಬಲಿಪಾಡ್ಯಮಿ ದಿನ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಒಂದೊಂದು ಗೋ ಮಾತೆಯನ್ನು ಪೂಜಿಸಲು ಅದೇಶ ಹೊರಡಿಸಿದ್ದಾರೆ.
ಗೋವುಗಳ ರಕ್ಷಣೆ ಮಾಡಲು ಗೋ ಸಂರಕ್ಷಣಾ ಕಾಯ್ದೆ -2021 ಅನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಹಾಗೂ ಗೋವುಗಳ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಕೆಲಸವಾಗಬೇಕಾದ್ದರಿಂದ ಬಲಿಪಾಡ್ಯಮಿ ಹಬ್ಬದ ದಿನದಂದು ( 2021 ನೇ ನವೆಂಬರ್ 05 ರಂದು ) ಪ್ರತೀ ದೇವಸ್ಥಾನಗಳಲ್ಲಿ ಒಂದೊಂದು ಗೋಮಾತೆಯನ್ನು ಪೂಜಿಸಿ , ಗೋಮಾತೆಯನ್ನು ಸಂರಕ್ಷಿಸುವ ಬಗ್ಗೆ ಕೂಡಲೇ ಸೂಕ್ತ ಸುತ್ತೋಲೆಯೊಂದನ್ನು ಹೊರಡಿಸುವಂತೆ ಸೂಚಿಸಿದೆ .
ಹಿಂದೂ ಧರ್ಮದ ಪುರಾಣ ಉಪನಿಷತ್ತುಗಳಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನವಿದ್ದು .ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ ಹೆಚ್ಚಿನ ದೇವಾಲಯಗಳ ವಾಸ್ತುಶಿಲ್ಪದಲ್ಲಿ ಹಸುವಿನ ಚಿತ್ರವನ್ನು ಕಾಣಬಹುದಾಗಿದ್ದು .
ಗೋಮಾತೆಯನ್ನು ಪೂಜಿಸಿದರೆ ಅನೇಕ ಸಮಸ್ಯೆಗಳು ಪರಿಹಾರವಾಗುವುದರ ಜೊತೆಗೆ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ ಎಂಬ ಬಲವಾದ ನಂಬಿಕೆ ಇರುವುದರಿಂದ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ ಮುಜರಾಯಿ ಹಜ್ ಹಾಗೂ ವಕ್ಫ್ ಸಚಿವರು ತಿಳಿಸಿದ್ದಾರೆ.