ಆಯುಧ ಪೂಜೆ ಹಬ್ಬದ ಸಂಭ್ರಮ: ಸಿಬ್ಬಂದಿ ಜೊತೆ ವಾಹನಗಳಿಗೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ

IMG-20211014-WA0219

ಶಿವಮೊಗ್ಗ: ಇಂದು ವಿಜಯ ದಶಮಿ ಹಬ್ಬದ ಸಂಭ್ರಮ. ದಸರಾ ಹಬ್ಬದ ಹಿನ್ನಲೆ‌ ದೇಶದಾದ್ಯಂತ ಅಯುಧ ಪೂಜೆ ಸಂಭ್ರಮ ಕಳೆಕಟ್ಟಿದೆ. ಶಿವಮೊಗ್ಗ ದಲ್ಲಿ ಸಹ ಆಯುಧ‌ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶಿವಮೊಗ್ಗ‌ ಜಿಲ್ಲಾಧಿಕಾರಿ ಶಿವಕುಮಾರ್ ಅವರು ‌ಅವರ‌ ನಿವಾಸ ( ಜಿಲ್ಲಾಧಿಕಾರಿ‌ ನಿವಾಸದಲ್ಲಿ ) ಸಂಪ್ರದಾಯದಂತೆ ಆಯುಧ ಪೂಜಾ ಕಾರ್ಯ‌‌ ನೆರವೇರಿಸಿದರು. ವಾಹನಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ, ಡಿಸಿ‌ ಕಚೇರಿ ವಾಹನ ಚಾಲಕ ಸಿಬ್ಬಂದಿ ವರ್ಗದವರ ಉಪಸ್ಥಿತರಿದ್ದು,ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

error: Content is protected !!