” ಶಿವನಹಳ್ಳಿ ರಮೇಶ್ ಮತ್ತು ಶ್ರೀನಿವಾಸ್ ಶಿವಗಂಗಾ ಇವರಿಗೆ ಹೃದಯಸ್ಪರ್ಶಿ ಸನ್ಮಾನ “

ಸನ್ಮಾನ

ದಾವಣಗೆರೆ: ಸಿರಿಗೆರೆಯಲ್ಲಿ ಇದೇ ಫೆಬ್ರವರಿ 22 ರಿಂದ 24ರ ವರೆಗೆ ನಡೆಯಲಿರುವ ತಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ದಾವಣಗೆರೆ ನಗರದ ಮಾಗನೂರು ಬಸಪ್ಪ ಮೈದಾನದಲ್ಲಿ ದಾವಣಗೆರೆ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾ ಸ್ಪರ್ಧೆಯನ್ನು ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಏರ್ಪಡಿಸಲಾಗಿತ್ತು.

ಇದರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದವರ ಜೊತೆಗೂಡಿ ಶಿವ ಸೇನೆಯ ಪದಾಧಿಕಾರಿಗಳು , ಸಮಾಜಮುಖಿ ಕಾರ್ಯಗಳಿಗೆ ಸದಾ ಸ್ಪಂದಿಸುತ್ತಿರುವ, ಸಮಾಜದ ಮುಖಂಡರುಗಳಾದ ಸನ್ಮಾನ್ಯ ಶಿವನಹಳ್ಳಿ ರಮೇಶ್ ಮತ್ತು ಸನ್ಮಾನ್ಯ ಶ್ರೀನಿವಾಸ್ ಶಿವಗಂಗಾ ಅವರನ್ನು ಅತ್ಯಂತ ಹೃದಯದ ಸ್ಪರ್ಶಿಯಾಗಿ ಸನ್ಮಾನಿಸಿದರು.

ಕ್ರೀಡಾಸ್ಪರ್ಧೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಶ್ರೀಮತ್ ಸಾಧು ಸದ್ಧರ್ಮ ವೀರೇಶೈವ ಸಂಘದ ತಾಲೂಕು ಘಟಕದ ಅಧ್ಯಕ್ಷ ಹೆಚ್ ಡಿ ಮಹೇಶ್ವರಪ್ಪ, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಗೌರವ ಕಾರ್ಯದರ್ಶಿ ಎಂ.ಬಿ ಸಂಗಮೇಶ್ವರ ಗೌಡ ,ಗಣ್ಯ ಜವಳಿ ಉದ್ಯಮಿ ಬಿ.ಸಿ ಉಮಾಪತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ .ವಾಮದೇವಪ್ಪ,ವಿದ್ಯಾನಗರದ ಮಹಾನಗರ ಪಾಲಿಕೆಯ ಸದಸ್ಯ ಶ್ರೀಮತಿ ಗೀತಾ ದಿಳಿಯಪ್ಪಪ್ಪ ,ಶಿವಸೈನ್ಯದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು , ಅಧ್ಯಕ್ಷ ಲಿಂಗರಾಜ್ ಅಗಸನಕಟ್ಟೆ, ಉಮೇಶ್ ಮಾಗನೂರು, ಕುಮಾರ್ ಮೆಳ್ಳೆಕಟ್ಟೆ, ಶಿವಕುಮಾರ್ ಕೊರಟಿಕೆರೆ, ರವಿಕುಮಾರ್, ಅಶೋಕ್ ಹೊನ್ನನಾಯಕನಹಳ್ಳಿ, ಸತೀಶ್ ಸಿರಿಗೆರೆ, ರವಿ ನುಗ್ಗಿಹಳ್ಳಿ, ವಿನ್ನರ್ ಅಕಾಡೆಮಿಯ ಸಂಸ್ಥಾಪಕ ಶಿವರಾಜ್ ಕಬ್ಬೂರು ,ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಇನ್ನೂ ಮುಂತಾದವರು ಉಪಸ್ಥಿತರಿದ್ದು ದಾವಣಗೆರೆ ತಾಲೂಕು ಮಟ್ಟದ ತರಳಬಾಳು ಹುಣ್ಣಿಮೆ ಕ್ರೀಡಾ ಸ್ಪರ್ಧೆ ಯಶಸ್ವಿಯಾಗಿ ಆಯೋಜನೆ ಮಾಡುವಲ್ಲಿ  ಶ್ರಮಿಸಿದರು.

Leave a Reply

Your email address will not be published. Required fields are marked *

error: Content is protected !!