ಶಿವಶಂಕರಪ್ಪ ನನ್ನ ಮಾವ, ತಂದೆ ಸಮಾನ ಫಂಡ್ ಕೊಟ್ಟರೆ ತೆಗೆದುಕೊಳ್ಳುವೆ – ಸಿದ್ದೇಶ್ವರ್

ದಾವಣಗೆರೆ: ಶಿವಶಂಕರಪ್ಪ ನನ್ನ ಮಾವ. ತಂದೆ ಸಮಾನರು. 2004ರಿಂದಲೂ ನಾನು ಸೋಲುವುದನ್ನು ನೋಡಿಕೊಂಡು ಬಂದಿದ್ದಾರೆ. ಮುಂದೆಯೂ ಸೋಲುವುದನ್ನು ನೋಡಿಕೊಂಡು ಹೋಗುತ್ತಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಸಿದ್ದೇಶ್ವರ ಸ್ಪರ್ಧಿಸುವುದಾದರೆ ನಾನೇ ಫಂಡ್ ಕೊಡುತ್ತೇನೆ. ಅವರು ಸೋಲುವುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದೇಶ್ವರ್, ಮಾವ ಫಂಡ್ ಕೊಡುವುದಾದರೆ ತೆಗೆದುಕೊಳ್ಳುತ್ತೇನೆ ಚುನಾವಣೆ ಖರ್ಚಿಗೆ 1 ಕೋಟಿ ಕೊಡೊತ್ತಾರೋ 5 ಕೋಟಿ ಕೊಡುತ್ತಾರೋ ಎಷ್ಟು ಕೊಡುತ್ತಾರೆ. ಅವರು ಹಣ ನೀಡಿದರೆ ಪಡೆಯುತ್ತೇನೆ ಎಂದಿದ್ದಾರೆ.

ಶಿವಶಂಕರಪ್ಪ ಅವರೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾದರೆ ಯಾರು ಬೇಡ ಎನ್ನುತ್ತಾರೆ? ಎಂದು ಪ್ರಶ್ನಿಸಿದ ಸಿದ್ದೇಶ್ವರ್, 2019ರವರೆಗೂ ಸಹಕಾರ ನೀಡಿ ಆಶೀರ್ವಾದ ಮಾಡಿದ್ದಾರೆ. ಈಗಲೂ ಸಹಕಾರ ಕೊಟ್ಟು, ಆಶೀರ್ವಾದ ಮಾಡಿ ಸೋಲಿಸಲಿ ಎಂದರು.
ಬಿಜೆಪಿಯಲ್ಲಿ ಹೊಂದಾಣಿಕೆ ರಾಜಕೀಯ ಇಲ್ಲ. ಕೆಲವರು ಅವರವರ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಯಡಿಯೂರಪ್ಪ ನಂತರ ಚುಕ್ಕಾಣಿ ಹಿಡಿದವರಿಗೆ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕೆನ್ನುವ ಛಲವಿರಲಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಬೊಮ್ಮಾಯಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯ ಅನ್ವಯ ರಾಜ್ಯಕ್ಕೆ ಎಷ್ಟು ಪ್ರಮಾಣದ ಅಕ್ಕಿ ನೀಡಬೇಕೋ ಅಷ್ಟು ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಬಫರ್ ಸ್ಟಾಕ್ ಅಕ್ಕಿಯನ್ನು ಎಲ್ಲರೂ ಕೇಳಿದ ತಕ್ಷಣ ಕೊಟ್ಟರೆ, ಭಾರತದಲ್ಲಿ ಶ್ರೀಲಂಕಾ ಇಲ್ಲವೇ ಪಾಕಿಸ್ತಾನದ ಪರಿಸ್ಥಿತಿ ತಲೆದೋರಲಿದೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಕೇಂದ್ರ ಸರ್ಕಾರ ಈಗಾಗಲೇ 5 ಕೆ.ಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್‌ನವರು 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿದ್ದಾರೆ. ಬಾಕಿ 5 ಕೆ.ಜಿ ಅಕ್ಕಿಯನ್ನು ಅವರು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಲಿ ಎಂದರು.

Leave a Reply

Your email address will not be published. Required fields are marked *

error: Content is protected !!