ಶೋಷಿತರಿಗೆ ಯಾವ ಸರ್ಕಾರವೂ ನೀಡದ ಆತ್ಮಸ್ಥೈರ್ಯ ಮುರುಘಾ ಮಠ ನೀಡಿದೆ. — ಬಾಡದ ಆನಂದರಾಜ್.
ಚಿತ್ರದುರ್ಗ: ಚಿತ್ರದುರ್ಗದ ಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಈ ನಾಡಿನ ಧಾರ್ಮಿಕ ಇತಿಹಾಸದಲ್ಲಿ ಒಂದು ಅಸಾಧಾರಣ ಮಠವಾಗಿದೆ ಎಂದು ಹೇಳಲು ನನಗೆ ಹೆಮ್ಮೆಯಾಗಿದೆ. ಶ್ರೀ ಮಠವು ಸಾಮಾಜಿಕ ಕಳಕಳಿಯೊಂದಿಗೆ ಮಾಡಿರುವ ಧಾರ್ಮಿಕ ಕಾರ್ಯಕ್ರಮಗಳನ್ನ ಯಾರು ಅಳಿಸಲಾಗದೇ ಇರುವಂತದ್ದು.. ಹೆಸರಾಂತ ಸಂಪ್ರದಾಯದ ಮಠವು ಮೂರು ಶತಮಾನಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಶೋಷಿತರಿಗೆ ಯಾವ ಸರ್ಕಾರವೂ ನೀಡದ ಆತ್ಮಸ್ಥೈರ್ಯ ನೀಡಿದ ಏಕೈಕ ಮಠ ಶ್ರೀ ಮುರುಘಾ ಮಠವಾಗಿದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಪ್ರಶಂಶೆ ವ್ಯಕ್ತ ಪಡಿಸಿದರು.
ಚಿತ್ರದುರ್ಗದ ಅನುಭವ ಮಂಟಪದಲ್ಲಿ ಏರ್ಪಡಿಸಿದ್ದ ಮುವತ್ತೊಂದನೇ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾತನಾಡುತ್ತಾ
ಶ್ರೀ ಮುರುಘಾ ಮಠವೂ ರಾಜ್ಯದ ಅಭಿವೃದ್ಧಿಯಲ್ಲಿ ಸೇವೆ ಒದಗಿಸುತ್ತಿದೆ. ಈ ಅಭಿವೃದ್ಧಿ ಕಾರ್ಯಗಳಿಂದ ಇದು ಒಂದು ದೇಶದ ದೊಡ್ಡ ಆಸ್ತಿ ಹಾಗೂ ಉನ್ನತ ಸ್ಥಾನ ಹೊಂದಿದೆ.
ಜನರ ಸಂಕಷ್ಟಗಳಿಗೆ ಬೃಹನ್ಮಠವು ಸದಾ ಮಿಡಿಯುತ್ತ ಬಂದಿದೆ. ಭೀಕರ ಬರಗಾಲ ಬಿದ್ದಾಗ ಗಂಜಿಕೇಂದ್ರಗಳನ್ನು ಸ್ಥಾಪಿಸಿ ಅನೇಕರ ಪ್ರಾಣ ಉಳಿಸಿದೆ.
ಬಡ ವಿದ್ಯಾರ್ಥಿಗಳಿಗಾಗಿ ಹಲವೆಡೆ ಉಚಿತ ಪ್ರಸಾದ ನಿಲಯಗಳನ್ನು ತೆರೆದಿದೆ. ಕೋಮು ಗಲಭೆಯಲ್ಲಿ ನೊಂದವರಿಗೆ ಸಾಂತ್ವನ ನೀಡಿದೆ. ಆಶ್ರಯವಿಲ್ಲದ ಬಡವರಿಗೆ, ಹಿಂದುಳಿದವರಿಗೆ ಹಾಗೂ ದಲಿತರಿಗೆ ಮಠವು ನಿವೇಶನಗಳನ್ನಾಗಿ ಮಾಡಿ, ಉಚಿತವಾಗಿ ಹಂಚಿದೆ. ಹಲವು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳು ಮತ್ತು ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ನಿತ್ಯದಾಸೋಹ. ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಬೃಹನ್ಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ.
“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಬೃಹನ್ಮಠ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಕರ್ನಾಟಕದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಶಾಲಾ ಕಾಲೇಜುಗಳು, ಪ್ರಸಾದ ನಿಲಯಗಳು ಇವನ್ನು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಬೃಹನ್ಮಠವೂ ಒಂದಾಗಿದೆ. ಇದರ ಒಂದು ಅಂಗ ಸಂಸ್ಥೆಯಾದ ‘ಎಸ್.ಜೆ.ಎಂ. ವಿದ್ಯಾಪೀಠ’ವು ಶಿಶುವಿಹಾರಗಳು, ಪ್ರಾಥಮಿಕ-ಮಾಧ್ಯಮಿಕ-ಪ್ರೌಢಶಾಲೆಗಳು ಪದವಿಪೂರ್ವ ಮತ್ತು ಕಲಾ, ವಿಜ್ಞಾನ, ವಾಣಿಜ್ಯ, ಕಾನೂನು, ಲಲಿತಕಲಾ ಪದವಿ ಕಾಲೇಜುಗಳು; ಚಿತ್ರಕಲಾ, ಶುಶ್ರೂಷೆ ಮತ್ತಿತರ ವೃತ್ತಿ ಶಿಕ್ಷಣದ ವಿವಿಧ ವಿದ್ಯಾಲಯಗಳು; ತಂತ್ರಜ್ಞಾನ, ದಂತವೈದ್ಯಕೀಯ, ಔಷಧಿ ವಿಜ್ಞಾನ ಮಹಾವಿದ್ಯಾಲಯಗಳು ಅಂಗವಿಕಲ ಮಕ್ಕಳ ವಸತಿಯುತ ಶಾಲೆಗಳು, ಈ ಮುಂತಾದುವುಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ವಿದ್ಯಾಪೀಠದ ವಿವಿಧ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು ಮುಕ್ಕಾಲು ಪಾಲು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಎಂಬುದು ಗಮನಾರ್ಹ ಸಂಗತಿ. ಬೃಹನ್ಮಠವು ಹೀಗೆ ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಸೇವೆಯನ್ನು ಸಲ್ಲಿಸಿದೆ ಮತ್ತು ಈಗಲೂ ಸಲ್ಲಿಸುತ್ತದೆ.
ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಮಹತ್ವದ್ದು
ಅಲ್ಲಿ ಅದ್ಧೂರಿ ಇಲ್ಲ, ವೈಭೋಗಕ್ಕೆ ಆಸ್ಪದವೇ ಇಲ್ಲ. ಸಂಪ್ರದಾಯ, ಮಂತ್ರ ಎಂಬುದಿದ್ದರೆ ಅದು ಶರಣತತ್ವ ಮಾತ್ರ. ಹೌದು, ಸುಮಾರು 31 ವರ್ಷ 9 ತಿಂಗಳಿಂದ ಸರಳ ಮತ್ತು ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಇಂಥದ್ದೊಂದು ಸಾಧನೆ ಮಾಡುತ್ತಾ ಬಂದಿದೆ ಚಿತ್ರದುರ್ಗದ ಮುರುಘಾ ಮಠ
ಇಲ್ಲಿ ಯಾವುದೇ ಮಂತ್ರ, ತಂತ್ರ, ಡಂಬಾಚಾರಗಳನ್ನು ಆಚರಿಸದೇ ಬಸವಾದಿ ಶರಣರ ತತ್ವಗಳನ್ನು ಯಥಾವತ್ತಾಗಿ ಪಾಲನೆ ಮಾಡುವುದು ಈ ಮಠದ ಹೆಗ್ಗಳಿಕೆಯಾಗಿದೆ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ, ಈ ಮಠದಲ್ಲಿ ಕಳೆದ 3 ದಶಕಗಳಿಂದ ಆಗಿರುವ ಸಾಮೂಹಿಕ ವಿವಾಹ ಸಾವಿರ ಸಾವಿರ.. ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ..
ಒಂದು ಮಠ ಇಂಥದ್ದೊಂದು ಕೆಲಸ ಮಾಡುತ್ತಿದೆ ಎಂದರೆ ಅದರ ಹಿಂದೆ ಒಂದು ಶಕ್ತಿ ಇದೆ ಆ ಶಕ್ತಿಯೇ ಡಾ. ಶಿವಮೂರ್ತಿ ಮುರಘಾ ಶರಣರು ನಮ್ಮ ಬುದ್ದಿಯವರು..
ಪ್ರತಿ ತಿಂಗಳ 5 ನೇ ತಾರೀಕ್ ಅಮಾವಸ್ಯೆ ಇರಲಿ ಹುಣ್ಣಿಮೆ ಇರಲಿ ಯಾವುದೇ ಮೌಡ್ಯತೆಗೆ ಶರಣಾಗದೇ ನವ ಜೋಡಿಗಳಿಗೆ ಬೆಳಕನ್ನ ನೀಡಿದೆ ಶ್ರೀ ಮಠ…
ಬೆಳ್ಳಿ ಹಬ್ಬದ ಮುಗಿಸಿರುವ ಸಾಮೂಹಿಕ ವಿವಾಹ ಸುವರ್ಣ ಮಹೋತ್ಸವ ಆಚರಣೆಯತ್ತಾ ಹೋಗುತ್ತಿದೆ ಎಂದರೆ ನಿಜಕ್ಕೂ ಆಶ್ವರ್ಯ ಮೊದಲು ಇಲ್ಲಿ ಮದುವೆಯಾದವರು ತಮ್ಮ ಮಕ್ಕಳನ್ನ ಶ್ರೀಮಠದಲ್ಲೇ ಮದುವೆ ಮಾಡಿರಬಹುದು.
ಜನೋಪಯೋಗಿ ಕಾರ್ಯಗಳ ಮೂಲಕವೇ ಮಠ ಅತಿ ಹೆಚ್ಚು ಭಕ್ತರನ್ನು ಹೊಂದಿದೆ ಎಂದರೆ ತಪ್ಪಾಗಲ್ಲ. ಈ ರೀತಿಯ ಸಾಮೂಹಿಕ ವಿವಾಹ ನಡೆಸುತ್ತಿರುವುದರಲ್ಲಿ ಏಕೈಕ ಮಠವಾಗಿದೆ..
ಇಲ್ಲಿ ಕೇವಲ ಬಡವರು ಮಾತ್ರವಲ್ಲ ಸಾಹಿತಿಗಳು, ಪತ್ರಕರ್ತರು, ಅಧಿಕಾರಿಗಳು, ಬುದ್ದಿ ಜೀವಿಗಳು ಸಹ ಶ್ರೀಗಳ ಕಾರ್ಯ ಮೆಚ್ಚಿ ಸಾಮೂಹಿಕ ಮದುವೆಯಾಗಿದ್ದಾರೆ.
ಅಂತರ್ ಜಾತಿ ವಿವಾಹ ಆಗುವ ಮೂಲಕ ಜಾತಿ ಪದ್ಧತಿಯನ್ನ ನಿರ್ಮೂಲ ಮಾಡಲು ಸಹ ಶ್ರೀಮಠ ಸಾಕ್ಷಿಯಾಗಿದೆ.
ಪ್ರಸ್ತುತ ದಿನಗಳಲ್ಲಿ ಸರಳ ವಿವಾಹಗಳ ಅಗತ್ಯ ಹೆಚ್ಚಿದೆ. ಇದರಿಂದ ಜಾತಿ ವ್ಯವಸ್ಥೆ ಸಡಿಲಗೊಳ್ಳುವ ಜೊತೆಗೆ ಆರ್ಥಿಕ ಸುಭದ್ರತೆ ಸಿಗಲಿದೆ.
ದೇಶದ ಸಂವಿಧಾನದ ಸ್ವಾಭಿಮಾನವನ್ನು ಕಾಪಾಡುವ ಪ್ರಕ್ರಿಯೆ ಸಾಮೂಹಿಕ ಮದುವೆಗಳಲ್ಲಿದೆ.
ವೈದಿಕ ಹಿಂದೂ ಸಂಪ್ರದಾಯಗಳ ಅಡಿಯಲ್ಲಿ ಮದುವೆಯನ್ನು ಸಂಸ್ಕಾರಗಳ ಪೈಕಿ ಒಂದೆಂದು ಕಾಣಲಾಗುತ್ತದೆ, ಮತ್ತು ಇದು ಒಬ್ಬ ಹೆಂಡತಿ ಮತ್ತು ಒಬ್ಬ ಗಂಡನ ಜೀವಮಾನದ ಬದ್ಧತೆಯಾಗಿದೆ. ಜೀವನದಲ್ಲಿ ಮದುವೆಯಾದರೆ ಇಂಥ ಸಾಮೂಹಿಕ ವಿವಾಹದಲ್ಲೇ ಅದರಲ್ಲೂ ಮುರಘಾ ಮಠದಲ್ಲೇ ಆಗಬೇಕು… ಏಕೆಂದೇ ಸಾಕ್ಷಾತ್ ಭಗವಂತ ರೂಪದಲ್ಲಿ ಶರಣರೇ ನಿಂತು ಮದುವೆ ಮಾಡಿಸುತ್ತಾರೆ ಯಾರಿಗಿದೆ ಇಂಥ ಭಾಗ್ಯ ಹೇಳಿ…
ಇನ್ನೂ ಸಾಮೂಹಿಕ ವಿವಾಹ ಜೊತೆಗೆ ಶಿಕ್ಷರ ದಿನಾಚರಣೆ ಕೂಡ ಮಾಡಲಾಗಿದೆ.
ಎಂಥ ಚಿಂತನೆ ನಮ್ಮ ಶರಣರದ್ದು ಸಮಾಜದಲ್ಲಿ ಬದಲಾವಣೆಯಾಗಬೇಕೆಂದರೆ ಶಿಕ್ಷಣಬೇಕು. ನಮಗೆ ಅಕ್ಷರ ಜ್ಞಾನ ಉಣಿಸುವ ಗುರುಗಳಿಗೆ ಗೌರವ ಸಲ್ಲಿಸಲು ಇಲ್ಲಿ ಅವಕಾಶವನ್ನ ಶ್ರೀ ಮಠ ಕಲ್ಪಿಸಿದೆ ಅದಕ್ಕೆ ಹೇಳೋದು ಮುರಾಘ ಮಠ ಸಾಕಷ್ಟು ಭಿನ್ನತೆ… “ವಿವಿಧತೆಯಲ್ಲಿ ಏಕತೆ ಮುರುಘಾ ಶರಣರ ವಿಶೇಷತೆ” ಎಂದು
ನಿಜಕ್ಕೂ ಇಂದಿನ ಕಾರ್ಯಕ್ರಮ
ನನ್ನ ಜೀವನದಲ್ಲಿ ಮರೆಯಲಾಗದಂತಾಗಿದೆ. ಶರಣರು ನನಗೆ ಆಹ್ವಾನ ಮಾಡಿರುವುದಕ್ಕೆ ಮಠಕ್ಕೆ ಚಿರೃಣಿಯಾಗಿದ್ದಾನೆ. ಎಂದು ಶಿವಮೂರ್ತಿ ಶರಣರಿಗೆ ಬಾಡದ ಆನಂದರಾಜ್ ರೊಂದಿಗೆ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾದ ಮಂಜುನಾಯ್ಕ.ಸಿವಿ.ನರೇಂದ್ರಕುಮಾರ್.ಮುರುಳಿ ಯಾದವ.ನರೇಂದ್ರ ಬಾಬು
ಗೌರವರ್ಪಣೆ ಮಾಡಿ ಸನ್ಮಾನಿಸಿದರು.
ವೇದಿಕೆಯಲ್ಲಿ ಮುರುಘಾ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ ಶಿವಮೂರ್ತಿ ಶರಣರು ಸಾನಿಧ್ಯ ವಹಿಸಿದ್ದರು.ಶ್ರೀ ಗುರು ಮಾತಾ ನಂದಾಂತಾಯಿಯವರು ಅದ್ಯಕ್ಷತೆವಹಿಸಿದ್ದರು ಸುಮಾರು ಹತ್ತು ನವ ಜೋಡಿಗಳಿಗೆ ಇದೇ ಸಂದರ್ಭದಲ್ಲಿ ಬಸವಣ್ಣನ ಆಶೀರ್ವಚನದೊಂದಿಗೆ ಕಲ್ಯಾಣ ಕಾರ್ಯ ನಡೆಯುತು.
ವಂದಿಸುತ್ತಾ ನನ್ನ ಮಾತು ಮುಗಿಸುತ್ತಿದ್ದೇನೆ…
ಶರಣು ಶರಣಾರ್ಥಿ….