RDWS JE ಪರೀಕ್ಷೆಯಲ್ಲಿ ನಿಯಮ ಪಾಲಿಸದ ಅಭ್ಯರ್ಥಿಗಳಿಗೆ ಶೋಕಾಸ್ ನೊಟೀಸ್
ಬೆಂಗಳೂರು: ಆರ್ ಡಿ ಡಬ್ಲೂ ಎಸ್ ಕಿರಿಯ ಇಂಜಿನಿಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಿಯಮ ಪಾಲಿಸದ ಅಭ್ಯರ್ಥಿಗಳಿಗೆ ಶೋಕಾಸ್ ನೊಟೀಸ್
24-12-2022 ರಂದು ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿನ ಕಿರಿಯ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಪತ್ರಲೇಖನದಲ್ಲಿ ಹೆಸರು, ವಿಳಾಸ ಬರೆಯುವುದರ ಮೂಲಕ ತಮ್ಮ ಅಭ್ಯರ್ಥಿತ್ವವನ್ನು ಬಹಿರಂಗಪಡಿಸಿದ ಮತ್ತು ಆಂಗ್ಲಭಾಷೆಯಲ್ಲಿ ಉತ್ತರಿಸಿದ್ದ 28 ಅಭ್ಯರ್ಥಿಗಳಿಗೆ ಕೆಪಿಎಸ್ ಸಿ ಯು ಇದೀಗ ಕಾರಣ ಕೇಳುವ ನೋಟೀಸ್ ಜಾರಿ ಮಾಡಿದೆ.
ಈ 28 ಅಭ್ಯರ್ಥಿಗಳು 30-01-2023 ರೊಳಗಾಗಿ ಶೋಕಾಸ್ ನೋಟೀಸ್ ಗೆ ಪ್ರತಿಕ್ರಿಯೆ ನೀಡುವುದು ಕಡ್ಡಾಯವೆಂದು ನೋಟೀಸ್ ನಲ್ಲಿ ತಿಳಿಸಿದೆ.