ಡಿ.27 ರಂದು ಹಾವೇರಿ ನಗರದಲ್ಲಿ ಶರಣ ಸಂಸ್ಕೃತಿ ಉತ್ಸವ – ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮಿ
![IMG-20211225-WA0008](https://garudavoice.com/wp-content/uploads/2021/12/IMG-20211225-WA0008-1.jpg)
ಹಾವೇರಿ : ನಗರದ ಶೀ ಹೊಸಮಠದಲ್ಲಿ ಲಿಂ.ಜಗದ್ಗುರು ಶ್ರೀ ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗೂ ಅಥಣಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಸ್ಮರಣೋತ್ಸವದ ನಿಮಿತ್ಯ ದಿ,27 ಸೋಮವಾರ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಸರಳ ಹಾಗೂ ಕೋವಿಡ್ ನಿಯಮದಡಿ ಜರುಗಲಿದೆ ಎಂದು ಶ್ರೀ ಹೊಸಮಠದ ಶ್ರೀಗಳಾದ ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಹೇಳಿದರು. ನಗರದ ಶ್ರೀ ಹೊಸಮಠದಲ್ಲಿ ಸುದ್ಧಿ ಗೋಷ್ಠಿಯಲ್ಲಿ ಅವರು ಶರಣ ಸಂಸ್ಕೃತಿ ಉತ್ಸವದ ಬಗ್ಗೆ ಮಾಹಿತಿ ನೀಡಿದರು.
ಸೋಮವಾರ ಬೆಳಿಗ್ಗೆ 7:30 ಘಂಟೆಗೆ ಶ್ರೀ ಮುರುಘೇಂದ್ರ ಶಿವಯೋಗಿಗಳವರ ವೇದಿಕೆಯಲ್ಲಿ ಚಿತ್ರದುರ್ಗ ಶೂನ್ಯಫೀಠಾಧ್ಯಕ್ಷರಾದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಪ್ರಾತ್ಯಕ್ಷಿಕೆಯಲ್ಲಿ ಸಹಜ ಶಿವಯೋಗ ಕಾರ್ಯಕ್ರಮ. ನಾಡಿನ ವಿವಿಧ ಮಠಾದೀಶರು ಪಾಲ್ಗೊಳ್ಳುವರು.10:30 ಘಂಟೆಗೆ ಕಾಗಿನೆಲೆ ರಸ್ತೆಯ ಶ್ರೀ ಮುರುಗೀಸ್ವಾಮಿಮಠದಲ್ಲಿ ಅಲ್ಲಮಪ್ರಭು ಶ್ರೀಗಳಾದ ನಾಗಭೂಷಣ ಸ್ವಾಮಿಗಳಿಂದ ಬಸವ ತತ್ತ್ವ ಧ್ವಜಾರೋಹಣ ಜರುಗುವುದು. ಸಂಜೆ 6:30 ಘಂಟೆಗೆ ಶ್ರೀ ನೈಘಂಟಿನ ಮುರುಗೀಸ್ವಾಮಿ ವೇದಿಕೆಯಲ್ಲಿ ಫೀಠಾರೋಹಣ ತೃತೀಯ ದಶಮಾನೋತ್ಸವದ ಅಂಗವಾಗಿ ಗುರುವಂದನಾ ಹಾಗೂ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ವೇದಿಕೆ ಕಾರ್ಯಕ್ರಮ ಮತ್ತು ಡಾ.ಶಿಮುಶ ಪ್ರಶಸ್ತಿ ಪ್ರಧಾನ ಮಾಡಲಾಗುವುದು ನಾಡಿನ ಪ್ರಸಿದ್ಧ ಮಹಾಸ್ವಾಮಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಈ ಬಾರಿ ಪ್ರಥಮ ಬಾರಿ ಮಹಿಳೆಯರಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ವಿಶ್ರಾಂತಿ ಕುಲಪತಿ ಗಳಾದ ಡಾ.ಮಲ್ಲಿಕಾ ಘಂಟಿ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ನಾಡಿನ ಜಿಲ್ಲೆಯ ಗುರು ಹಿರಿಯರು,ನಾಗರಿಕರು ಹಾಗೂ ಸದ್ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿರಿ ಎಂದು
ಶ್ರೀ ಬಸವ ಶಾಂತಲಿಂಗ ಸ್ವಾಮಿಗಳು ಹೇಳಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ದಯಾನಂದ ಯಡ್ರಾಮಿ.ಪದಾಧಿಕಾರಿಗಳಾದ ಸಂಜೀವಕುಮಾರ ನೀರಲಗಿ. ಪರಮೇಶಪ್ಪ ಮೇಗಳಮನಿ.ನಾಗೇಂದ್ರ ಕಡಕೋಳ.ಡಾ.ಬಸವರಾಜ ವೀರಾಪುರ.ರಾಜೇಂದ್ರ ಸಜ್ಜನರ.ರುದ್ರೇಶ ಚಿನ್ನಣ್ಣನವರ ಸೇರಿದಂತೆ ಅನೇಕರಿದ್ದರು.