ಶ್ರೀ ಕೃಷ್ಣನ ವೇಷಧರಿಸಿ ಮಿಂಚಿದ ವೀಕ್ಷಾ
ದಾವಣಗೆರೆ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇಂದು ಚಿಣ್ಣರು ಶ್ರೀಕೃಷ್ಣನ ವೇಷಧರಿಸಿ ಗಮನ ಸೆಳೆದರು.
ಕೊಳಲು ಹಿಡಿದು, ತಲೆಗೆ ನವಿಲು ಗರಿ ಸಿಕ್ಕಿಸಿಕೊಂಡು, ಬಾಯಲ್ಲಿ ಬೆಣ್ಣೆ ಮೆತ್ತಿಕೊಂಡು ನೋಡುಗರನ್ನು ರಂಜಿಸಿದ್ದು ಇಂದು ದಾವಣಗೆರೆಯಲ್ಲಿ ಕಂಡುಬಂದಿತು.
ಅದರಂತೆ ಸರಸ್ವತಿ ನಗರದ ಎಂ.ಡಿ.
ವಿದ್ಯಾಸಾಗರ್ ಮತ್ತು ಹೆಚ್.ಜೆ. ಆಶಾ ದಂಪತಿಗಳ ಒಂದು ವರ್ಷದ ಮುದ್ದು ಕಂದ ವೀಕ್ಷಾ ವಿ. ಬೆಣ್ಣೆ ಮೆಲ್ಲುತ್ತಿರುವ ಹಾಗೆ ಫೋಸ್ ಕೊಟ್ಟು ಎಲ್ಲರನ್ನು ಆಕರ್ಷಿಸಿದಳು.