ಬಸವರಾಜ ಸ್ವಾಮಿಯವರ ನಿಧಕ್ಕೆ ಶ್ರೀ ಶೈಲ ಜಗದ್ಗುರುಗಳ ಸಂತಾಪ

ಬಸವರಾಜ ಸ್ವಾಮಿಯವರ ನಿಧಕ್ಕೆ ಶ್ರೀ ಶೈಲ ಜಗದ್ಗುರುಗಳ ಸಂತಾಪ

ದಾವಣಗೆರೆ : ಶ್ರೀಶೈಲ ಪೀಠದ ಎಜೆಂಟರಾದ ಎಮ್ ಎಸ್ ಬಸವರಾಜ ಸ್ವಾಮಿಯವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಶಿವೈಕ್ಯರಾಗಿದ್ದು ತೀವ್ರ ಆಘಾತವನ್ನುಂಟು ಮಾಡಿದೆ. ಲಿಂ. ವಾಗೀಶ ಜಗದ್ಗುರುಗಳ ಆದೇಶದ ಮೇರೆಗೆ ತಮ್ಮ ಹದಿನೆಂಟನೇಯ ವಯಸ್ಸಿನಲ್ಲಿಯೇ ಪೀಠದ ಸೇವೆಯನ್ನು ಆರಂಭಿಸಿದ ಶ್ರಿಯುತರು ಕಳೆದ ನಲವತ್ತೈದು ವರ್ಷಗಳಿಂದ ಶ್ರೀ ಪೀಠದ ಕೋ ಎಜೆಂಟ್, ಎಜೆಂಟ್ ಮತ್ತು ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ನ್ಯಾಯಾಲಯದ ಪ್ರಮುಖ ವ್ಯಾಜ್ಯೆಗಳಲ್ಲಿ ಜಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಅಗಲುವಿಕೆಯಿಂದ ಶ್ರೀಪೀಠಕ್ಕೆ ತುಂಬಲಾಗದ ಕೊರತೆಯುಂಟಾಗಿದೆ. ಜಗದ್ಗುರು ಪಂಚಾಚಾರ್ಯರ ಶ್ರೀಶೈಲ ಪೀಠದ ಎಲ್ಲ ಜಗದ್ಗುರುಗಳ ಹಾಗೂ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿಯರು ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಇವರ ವಿಯೋಗದಿಂದ ದುಃಖತಪ್ತರಾದ ಇವರ ಪರಿವಾರಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅನುಗ್ರಹಿಸಲೆಂದು ಹಾರೈಸಲಾಗಿದೆ. ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!