ಅಕ್ಟೋಬರ್ 28ರಂದು ಎಂ ಎಸ್ ಎಸ್ ತರಬೇತಿ ಕೇಂದ್ರ ಹಾಗೂ 10xPlus ಶಿಬಿರದ ಉದ್ಘಾಟನೆ

IMG-20211026-WA0047

ದಾವಣಗೆರೆ: ಇದೆ 28ರ ಗುರುವಾರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ MSS ತರಬೇತಿ ಕೇಂದ್ರದ ಉದ್ಘಾಟನೆ ಮತ್ತು 10xPlus ತರಬೇತಿ ಶಿಬಿರ ಶಿಕ್ಷಣ ಶಿಲಾಫಲಕವನ್ನು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸನ್ಮಾನ್ಯ B C ನಾಗೇಶ್‌ರವರು ಮಾಡಲಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ|| ಜಯಂತ್
ಶಿಕ್ಷಣ ಕ್ಷೇತ್ರದಲ್ಲೊಂದು ಹೊಸ ಕ್ರಾಂತಿ MSS ಟ್ರೈನಿಂಗ್ ಸೆಂಟರ್ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಕಳೆದ 52 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದು . ವಿನೂತನ ಪ್ರಯೋಗಗಳಿಗೆ ನಮ್ಮ ಸಂಸ್ಥೆಯ ಮಕ್ಕಳನ್ನು ಸಿದ್ಧಗೊಳಿಸಿದ್ದು .

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಾ ಬಂದಿದೆ . ಇದೀಗ lOxPlus ಎಂಬ ಹೊಸ ಆವಿಷ್ಕಾರದೊಂದಿಗೆ ರಾಜ್ಯದ ಎಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆ ಸಿದ್ಧಪಡಿಸಿದೆ .

ಹಲವಾರು ವರ್ಷಗಳ ಅಧ್ಯಯನದಿಂದ ವೈಜ್ಞಾನಿಕವಾಗಿ ಇದನ್ನು ರೂಪಿಸಿದ್ದು . ಮೆದುಳನ್ನು ಚುರುಕುಗೊಳಿಸುವ ಮೂಲಕ ಮಕ್ಕಳಲ್ಲಿ ಗ್ರಹಣಶಕ್ತಿ , ಸ್ಮರಣಶಕ್ತಿಯನ್ನು ಹೆಚ್ಚಿಸುವ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ವಿಧಾನ IOxPlus : ಪ್ರತಿ ಮಗುವಿಗೆ ಆರು ದಿನಗಳ 10xPlus ತರಬೇತಿ ನೀಡುವುದರಿಂದ ಆ ಮೂಲಕ ಬದಲಾವಣೆ ತರಬಹುದು ಎಂಬುದು ಈಗಾಗಲೇ ತರಬೇತಿ ಪಡೆದ ಮಕ್ಕಳ ಅಭಿಪ್ರಾಯ ಕಲಿಕೆಯ ತಂತ್ರವನ್ನು ಮಕ್ಕಳು ಅಳವಡಿಸಿಕೊಂಡರೆ ಸಂತೋಷದಾಯಕ ಕ್ರಿಯೆ . ಗಣಿತ , ವಿಜ್ಞಾನದಂತಹ ಕ್ಲಿಷ್ಟ ಸಂಗತಿಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ ಎಂದರು

ಹರಿಹರ ತಾಲೂಕು ಕೊಂಡಜ್ಜಿ ಸಮೀಪ 13 ಎಕರೆ ಪ್ರಕೃತಿ ಸೊಬಗಿನ ನಡುವೆ 10xPlus ತರಬೇತಿ ನಡೆಯುತಿದ್ದು ರಾಜ್ಯದ ಎಲ್ಲ ಪ್ರೌಢಶಾಲೆಗಳ ಇಬ್ಬರು ( 1 ಬಾಲಕ , | ಬಾಲಕಿ ) ಮಕ್ಕಳಿಗೆ ಈ ತರಬೇತಿ ನೀಡುವ ಉದ್ದೇಶವಿದ್ದು . 10xPlus ಪರಿಚಯಿಸುವ ಪ್ರಾರಂಭಿಕ ಹಂತದಲ್ಲಿ ಈ ತರಬೇತಿಯನ್ನು ಉಚಿತವಾಗಿ ನೀಡಲು ನಮ್ಮ ಸಂಸ್ಥೆ ನೆರವು ಹಸ್ತ ನೀಡಿದೆ .

ದಾವಣಗೆರೆಯಿಂದ ಕೊಂಡಜ್ಜಿ ಸಮೀಪವಿರುವ 10xPlus ಕೇಂದ್ರಕ್ಕೆ ವಾಹನ ಸೌಲಭ್ಯವಿರುತ್ತದೆ . ಬೆಳಗಿನ ಉಪಹಾರ ಮತ್ತು ಮಧ್ಯಾನ್ಹದ ಊಟವಿರುತ್ತದೆ . ಸಂಜೆ ವಾಹನದ ಮೂಲಕ ಸಿದ್ಧಗಂಗಾ ಸಂಸ್ಥೆಗೆ ಕರೆತರಲಾಗುವುದು . ದೂರದೂರಿನ ಮಕ್ಕಳಿಗೆ ವಸತಿ ಸೌಕರ್ಯವಿರುತ್ತದೆ . ಪ್ರತಿ ತಂಡದಲ್ಲಿ 80 ಮಕ್ಕಳಿಗೆ ತರಬೇತಿ ನೀಡಲಾಗುವುದು ಎಂದರು.

ಎಂ ಎಸ್ ಎಸ್ ಟ್ರೈನಿಂಗ್ ಸೆಂಟರ್ ಫಲಕವನ್ನು ದಾವಣಗೆರೆ ಲೋಕಸಭಾ ಸದಸ್ಯ : ಜಿಎಂ ಸಿದ್ದೇಶ್ವರ , 10xPlus : ಲೋಗೋವನ್ನು ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಶ್ರೀ ಎಸ್ಎ ರವೀಂದ್ರನಾಥ್ , ಎಂ ಎಸ್ ಎಸ್ ಟ್ರೈನಿಂಗ್ ಸೆಂಟರ್‌ನಲ್ಲಿ ಸ್ಥಾಪಿಸಲಾಗುವ ಶಿಕ್ಷಣ ಶಿಲ್ಪಿ M. S ಶಿವಣ್ಣನವರ ಮೂರ್ತಿಯನ್ನು ವಿಧಾನಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ || ಎ ಹಚ್ ಶಿವಯೋಗಿ ಸ್ವಾಮಿ ಮತ್ತು IQxPlus ಕೈಪಿಡಿಯನ್ನು ದಾವಣಗೆರೆ ಜಿಲ್ಲಾಧಿಕಾರಿ ಮಹಂತೇಶ ಬೀಳಗಿ ಲೋಕಾರ್ಪಣೆ ಮಾಡುವರು

ಪತ್ರಿಕಾ ಗೋಷ್ಠಿಯಲ್ಲಿ ಸಿದ್ಧಗಂಗಾ ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿ’ಸೌಜ, ಸಂಸ್ಥೆಯ ಕಾರ್ಯದರ್ಶಿ . S ಹೇಮಂತ್ ಸಂಯೋಜಕ ಸಾಮ್ರಾಟ್ ಕೇಣಿ ಇದ್ದರು

Leave a Reply

Your email address will not be published. Required fields are marked *

error: Content is protected !!