ಒಬ್ಬರಿಗೊಬ್ಬರು ಎದುರಾದ ಸಿದ್ದರಾಮಯ್ಯ-ಬೊಮ್ಮಾಯಿ ಪರಸ್ಪರ ಕೈ ಕುಲುಕಿ ನಕ್ಕ ನಾಯಕರು
ಬೆಳಗಾವಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಸ್ಪರ ಎದುರಾದರು.
ಮುಂದೆ ಏನಾಗಬಹುದು? ಎಂದು ಕುತೂಹಲದಿಂದ ನೆರೆದಿದ್ದವರು ವೀಕ್ಷಿಸುತ್ತಿದ್ದರು. ಆದರೆ ಇಬ್ಬರು ಖುಷಿಯಿಂದ ನಗುತ್ತಾ ಪರಸ್ಪರ ಕೈ ಕುಲುಕಿಕೊಂಡರು. ಅಷ್ಟೇ ಅಲ್ಲ ಸಿದ್ದರಾಮಯ್ಯನವರು ಪ್ರೀತಿಯಿಂದ ಬಸವರಾಜ ಬೊಮ್ಮಾಯಿಯವರ ಹೆಗಲು ತಟ್ಟಿದರು.
ಈಗ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯ.ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿ ಇಡೀ ಲಿಂಗಾಯತ ಸಮುದಾಯಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಬಿಂಬಿಸಿತ್ತು. ಇನ್ನು ನಿನ್ನೆಯಷ್ಟೇ ಬೆಳಗಾವಿಯ ಕಾಗವಾಡದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ ಅವರಂತಹ ಭ್ರಷ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ಆರೋಪಿಸಿದ್ದರು.