ದಾವಣಗೆರೆ, ಅ.02: ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ವಿರುದ್ಧ ಕಾಂಗ್ರೆಸ್ ಶಾಸಕ ಹಾಗು ಅಖಿಲ ಭಾರತ ವೀರಶೈವ ಮಹಾ ಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮತ್ತೆ ಗುಡುಗಿದ್ದಾರೆ.
ಶಾಮನೂರು ಶಿವಶಂಕರಪ್ಪ ಅವರು, ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದ್ದು ಸತ್ಯ. ಒಂದು ಡಿಸಿ ಕೊಟ್ಟಿಲ್ಲ. ಈ ಬಗ್ಗೆ ಸಿಎಂ ಜೊತೆ ಮಾತಾಡುವೆ. ಎಲ್ಲಿ, ಯಾರಿಗೆ ತೊಂದರೆಯಾಗಿದೆ ಎಂದು ಹೇಳ್ತೀನಿ ಎಂದು ಹೇಳಿದ್ದಾರೆ.
ಈ ಬಾರಿಯ ಸಂಪುಟದಲ್ಲಿ ಏಳು ಸಚಿವ ಸ್ಥಾನ ನೀಡಿದ್ದಾರೆ. ಅದರ ಬಗ್ಗೆ ನಮ್ಮದು ಪ್ರಶ್ನೆ ಇಲ್ಲಾ. ನಮ್ಮ ಲಿಂಗಾಯತ ಸಮಾಜದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಿಗೆ ಕೀ ಪೋಸ್ಟ್ ಬಗ್ಗೆ ಹೇಳುತ್ತಿರುವೆ. ನಾನು ಸತ್ಯ ಹೇಳಿದ್ದೇನೆ. ಅದಕ್ಕೆ ಈ ವಿಚಾರ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು.
davanagere; ಕಳಪೆ ಕಾಮಗಾರಿಗೆ ಮತ್ತೊಂದು ನಿದರ್ಶನ ದಾವಣಗೆರೆ ಹೊಂಡದ ಸರ್ಕಲ್ ಕಲ್ಯಾಣಿ!
ವಿಶ್ವನಾಥ ಗೆ ಹುಚ್ಚಾಸ್ಪತ್ರೆಗೆ ಕಳುಹಿಸಿ
ನಾನು ಸತ್ಯ ಹೇಳಿದ್ದೇನೆ. ಎಚ್ ವಿಶ್ವನಾಥ ಅವರು ಬೆಣ್ಣೆ ಹಚ್ಚಿ, ಮಸ್ಕಾ ಹೊಡೆದು ಎಂಎಲ್ ಸಿ ಆಗಿದ್ದಾನೆ, ನಾನು ಜನರಿಂದ 7 ಸಲ ಎಂಎಲ್ ಎ ಆಗಿರುವೆ. ಅವರನ್ನ ಹುಚ್ಚಾಸ್ಪತ್ರೆಗೆ ಕಳಿಹಿಸಬೇಕು ಎಂದು ಕಿಡಿಕಾರಿದರು.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗಿದೆ. ಸಿಎಂಗೆ ನಾನು ಮಾತನಾಡುತ್ತೇವೆ. ಎಲ್ಲಿ ಯಾರಿಗೆ ಅನ್ಯಾಯ ಆಗಿದೆ ಎಂಬುದನ್ನ ನಾನು ಸ್ಪಷ್ಟ ಪಡಿಸುವೆ ಎಂದರು.
