ಬೆಳಗಾವಿ, ಅ.02: ಬೆಳಗಾವಿಯಲ್ಲಿ ನಾಳೆ ನಾಡ ದೊರೆ ಸಿದ್ದರಾಮಯ್ಯ (Siddaramaiah) ಅವರಿಗೆ ರಾಷ್ಟ್ರೀಯ ಶೇಫರ್ಡ್ ಇಂಡಿಯಾ ಸಂಘಟನೆಯಿಂದ ರಾಷ್ಟ್ರೀಯ ಸನ್ಮಾನ ಮಾಡಲು ಅದ್ಧೂರಿ ಸಮಾರಂಭಕ್ಕೆ ಕ್ಷಣಗಣನೆ ಶುರು ಆಗಿದೆ.
ರಾಜ್ಯದಲ್ಲಿ 2ನೇ ಬಾರಿ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಷ್ಟ್ರ ಮಟ್ಟದಲ್ಲಿ ಕುರುಬರ ಸಂಘಟನೆಯವರು ಮುಖ್ಯಮಂತ್ರಿಗಳನ್ನು ಸನ್ಮಾನಿಸಲು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ತಯಾರಿ ಮಾಡಿಕೊಂಡಿದ್ದಾರೆ.
ಬೆಳಗಾವಿ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಲಿದ್ದು ಬೃಹತ್ ವೇದಿಕೆ ಸಿದ್ದಗೊಂಡಿದೆ.
