ಮಾತಿಗೆ ಎಷ್ಟು ಬೆಲೆ ಇದೆ ಎಂಬುದನ್ನು ಸಿದ್ದೇಶ್ವರ ಶ್ರೀ ತಿಳಿಸಿದ್ದರು : ಈಶ್ವರಪ್ಪ

ದಾವಣಗೆರೆ: ಜ.3 ಸಿದ್ದೇಶ್ವರ ಶ್ರೀಗಳು ಮಾತುಗಳ ಮೂಲಕ ಜನರ ಮನಸ್ಸನ್ನು ಹಸನುಗೊಳಿಸುವ ಮೂಲಕ ಮನುಷ್ಯನ ಮಾತಿಗೆ ಎಷ್ಟು ಬೆಲೆ ಇದೆ ಎಂದು ತಿಳಿಸಿಕೊಟ್ಟಿದ್ದರು ಎಂದು ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಸ್ಮರಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಭಕ್ತಿ ಪೂರ್ವಕ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದೇಶ್ವರ ಶ್ರೀಗಳ ಪ್ರವಚನಗಳು ಉತ್ತಮ ಸಂದೇಶಗಳ ಮೂಲಕ ಜನರ ಮನಸ್ಸನ್ನು ಹಸನುಗೊಳಿಸುವ ಜೊತೆಗೆ ಬದುಕಿನ ಮೌಲ್ಯವನ್ನು ತಿಳಿಸಿಕೊಟ್ಟಿದ್ದರು. ಅವರನ್ನು ಸ್ವಾಮೀಜಿ ಎನ್ನುವುದಕ್ಕಿಂತ ಒಬ್ಬ ಶ್ರೇಷ್ಠ ಸಂತ, ಆಧುನಿಕ ಗಾಂಧಿ ಎಂದರೆ ತಪ್ಪಾಗಲಾರದು. ನುಡಿದಂತೆ ನಡೆದ ಸಂತರು ತಮಗಾಗಿ ಏನನ್ನು ಬಯಸದೆ ಪರರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಆಧುನಿಕ ಗಾಂಧಿಯಾಗಿದ್ದರು ಎಂದು ಹೇಳಿದರು.

ರಂಗಕರ್ಮಿ ಹಾಗೂ ಹಿರಿಯ ಪತ್ರಕರ್ತ ಬಾಮ ಬಸವರಾಜಯ್ಯ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಪುಟ್ಟ ಹಳ್ಳಿಯಲ್ಲಿ ಜನಿಸಿ ವಿಶ್ವದ ಜನರ ಮನಸ್ಸಿನಲ್ಲಿ ನಿಂತ ಪರಿ ಪ್ರಸ್ತುತ ಧಾರ್ಮಿಕ ಮುಖಂಡರಿಗೆ ಮಾರ್ಗಸೂಚಿ ಆಗಬೇಕು ಎಂದ ಅವರು, ಶರಣರ ಗುಣವನ್ನು ಮರಣದಲ್ಲಿ ಕಾಣು ಎಂಬ ಹಿರಿಯರ ಮಾತಿನಂತೆ ಸಿದ್ದೇಶ್ವರ ಶ್ರೀಗಳು ಜಾಗತಿಕ ಧಾರ್ಮಿಕರ ಗ್ರಂಥವನ್ನು ಆಳವಾಗಿ ಅಭ್ಯಸಿಸಿ ಪ್ರವಚನಗಳಿಂದ ಮನಮುಟ್ಟುವಂತೆ ಸರಳವಾಗಿ ಬೋಧಿಸುತ್ತಿದ್ದರು. ಇಡೀ ಪ್ರಪಂಚದಲ್ಲಿ ಜನರ ಮನಸ್ಸಿಗೆ ನಾಟುವಂತೆ ಮಾತನಾಡುತ್ತಿದ್ದವರಲ್ಲಿ ವಿವೇಕಾನಂದರು ಬಿಟ್ಟರೆ ಸಿದ್ದೇಶ್ವರ ಶ್ರೀಗಳು ಆಗಿದ್ದರು ಎಂದು ಹೇಳಿದರು. (3ನೇ ಪುಟಕ್ಕೆ) ಸಾಂಸ್ಕೃತಿಕ ಉಡುಗೆಯಲ್ಲಿ ವಿದ್ಯಾರ್ಥಿನಿಯರು ದಾವಣಗೆರೆ ನಗರದ ಎ.ವಿ. ಕಮಲಮ್ಮ ಮಹಿಳಾ ಪದವಿ ಕಾಲೇಜಿನಲ್ಲಿ ದಾವಣಗೆರ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಅಂತರ್ ವಲಯ ಮಟ್ಟದ ಕಾಲೇಜುಗಳಿಗಾಗಿ ಏರ್ಪಡಿಸಿದ್ದ “ಶಿವಗಂಗೋತ್ರಿ ಯುವಜನೋತ್ಸವ 2022-23”ರ ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದರು.

Leave a Reply

Your email address will not be published. Required fields are marked *

error: Content is protected !!