ಲೋಕಲ್ ಸುದ್ದಿ

ಭೋವಿ ಶ್ರೀ ಗಳ ಅಧ್ಯಕ್ಷತೆಯಲ್ಲಿ ಸಿದ್ಧರಾಮೇಶ್ವರ ರಥೋತ್ಸವ 

ಭೋವಿ ಶ್ರೀ ಗಳ ಅಧ್ಯಕ್ಷತೆಯಲ್ಲಿ ಸಿದ್ಧರಾಮೇಶ್ವರ ರಥೋತ್ಸವ

ದಾವಣಗೆರೆ : ನಗರದ ವೆಂಕಭೋವಿ ಕಾಲೊನಿ ಸಿದ್ಧರಾಮೇಶ್ವರ ಮಠದಲ್ಲಿ ಸಿದ್ಧರಾಮೇಶ್ವರ ರಥೋತ್ಸವ ಹಾಗೂ ಲಿಂಗೈಕ್ಯ ಸಿದ್ಧರಾಮೇಶ್ವರ ಸ್ವಾಮೀಜಿಯವರ ಸಂಸ್ಮರಣೋತ್ಸವ ಸಮಾರಂಭದ ಪೂರ್ವಭಾವಿ ಸಭೆಯು ಭೋವಿ ಗುರುಪೀಠದ ಜಗದ್ಗುರು ಶ್ರೀಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳ ದಿವ್ಯ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು ಸಮಾರಂಭದ ವಿವರಣೆ ನೀಡಿದರು.

ದಿನಾಂಕ : 13-08-2023, ಭಾನುವಾರ ಬೆಳಗ್ಗೆ 8.00 ಗಂಟೆಗೆ ಧರ್ಮ ಧ್ವಜಾರೋಹಣ

ದಿನಾಂಕ : : 16-08-2023 ರಿಂದ 21-08-2023 ರವರೆಗೆ, ನಿತ್ಯ ಬೆಳಗಿನಜಾವ ಶ್ರೀಗುರು ಸಿದ್ಧರಾಮೇಶ್ವರ ಸ್ವಾಮಿ ಭಜನಾ ಮಂಡಲಯವರಿಂದ ವಚನ ಭಜನೆ ಏರ್ಪಡಿಸಲಾಗಿದೆ.

ದಿನಾಂಕ : 19-08-2023ನೇ ಶನಿವಾರ, ಬೆಳಗ್ಗೆ 9.00 ಗಂಟೆಗೆ ಸಿದ್ಧರಾಮೇಶ್ವರ ವಚನಾಭಿಷೇಕ ಏರ್ಪಡಿಸಲಾಗಿದೆ.

ದಿನಾಂಕ 19-08-2023ನೇ ಶನಿವಾರ ಸಂಜೆ 7.00 ಗಂಟೆಗೆ “ಶ್ರೀ ಸಿದ್ಧರಾಮೇಶ್ವರ ಜೀವನ ದರ್ಶನ” ಪ್ರವಚನ ಏರ್ಪಡಿಸಲಾಗಿದೆ.

ದಿನಾಂಕ : 20-08-2023ನೇ ಭಾನುವಾರ, ರಾತ್ರಿ 10.00 ರಿಂದ ಮುಂಜಾನೆ 5,೦೦ ರವರೆಗೆ ಮಹಾವಚನ ಭಜನೆ ಏರ್ಪಡಿಸಲಾಗಿದೆ.

ದಿನಾಂಕ : 21-08-2023ನೇ ಸೋಮವಾರ ಮಹಾ ದಾಸೋಹ ಏರ್ಪಡಿಸಲಾಗಿದೆ.

ನಾಡಿನ ವಿವಿಧ ಮಠಾಧೀಶ್ವರರ ನೇತೃತ್ವದಲ್ಲಿ ರಾಜಕಾರಣಿಗಳ ಗೌರವ ಉಪಸ್ಥಿತಿಯಲ್ಲಿ ದಿನಾಂಕ 21-06-2023ನೇ ಸೋಮವಾರ, ಬೆಳಗ್ಗೆ 10.00ಗಂಟೆಗೆ ಮಂಗಳ ವಾದ್ಯ, ಜಾನಪದ ಕಲಾಮೇಳಗಳು ಹಾಗೂ ಪೂರ್ಣಕುಂಭ ಮತ್ತು ಕಳಸಗಳೊಂದಿಗೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಶ್ರೀ ದೇವರ ರಥೋತ್ಸವ ಹಾಗೂ ಲಿಂಗೈಕ್ಯ ಪೂಜ್ಯ ಶ್ರೀಗಳ ಭಾವಚಿತ್ರ ಮತ್ತು ಶರಣರ ಭಾವಚಿತ್ರಗಳ ಮೆರವಣಿಗೆ ವಿಜೃಂಬಣೆಯಿಂದ ಜರುಗುವುದು.

ಸಭೆಯಲ್ಲಿ ಸಮಾಜದ ಮುಖಂಡರಾದ ಜಯಣ್ಣ ಹೆಚ್, ಗೋಪಾಲ ವಕೀಲ, ನಾಗರಾಜ, ಗಣೇಶ, ಶ್ರೀನಿವಾಸ, ಮಂಜುನಾಥ, ಹನುಮಂತ, ಮೂರ್ತ್ಯಪ್ಪ, ಶೇಖರಪ್ಪ, ಕುಮಾರ, ನಲ್ಲಿ ಮಂಜು, ಹರಿಹರ ವಿಜಯಕುಮಾರ, ಹೊನ್ನಳ್ಳಿ ದಿನೇಶ, ಹರಪ್ಪನಹಳ್ಳಿ ಗುರುಸಿದ್ಧಪ್ಪ, ಹಾಗೂ ಇನ್ನಿತರರು ಉಪಸ್ಥಿತಿಯಿದ್ದರು.

 

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!