ಸಿಡಿಲು ಬಡಿದು ಒಂದು ಸಾವು ನಾಲ್ವರಿಗೆ ಗಾಯ

IMG-20211023-WA0137

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಎಂ.ಜಿ ದಿಬ್ಬದ ಬಳಿ ಸಿಡಿಲು ಬಡಿದು ಓರ್ವ ಸ್ಥಳದಲ್ಲೇ ಸಾವುಕಂಡಿದ್ದು, ನಾಲ್ವರಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

ತಾಲ್ಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಜುಂಜುಪ್ಪನ ದೇಗುಲದ ಬಳಿ ಆಲದಮರದ ಕೆಳಗೆ ನಿಂತಿದ್ದ ಐವರು ದಾರಿಹೋಕರಿಗೆ ಸಿಡಿಲು ಬಡಿದು ಈ ಅನಾಹುತ ಸಂಭವಿಸಿದೆ.

ಹೊಸದುರ್ಗ ಪಟ್ಟಣದ ಸಿದ್ದಪ್ಪ(45) ಮೃತ ದುರ್ದೈವಿ.ಗಂಭೀರವಾಗಿ ಗಾಯಗೊಂಡ ಓರ್ವ ಗಾಯಾಳು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಗಾಯಾಳುಗಳು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!