ಬಾನಾಡಿಗಳಿಗೆ ಸ್ಕಿಲ್ ಪ್ಲಸ್ – ಲೀಡ್ ವಿದ್ಯಾರ್ಥಿಗಳಿಂದ ಕಾಳು – ನೀರು ಜಾಥಾ
ಹರಿಹರ: ನಗರದ ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ, ದೇಶಪಾಂಡೆ ಫೌಂಡೇಶನ್, ದೇಶಪಾಂಡೆ ಸ್ಕಿಲ್ಲಿಂಗ್, ಸ್ಕಿಲ್ ಪ್ಲಸ್ ವಿದ್ಯಾರ್ಥಿಗಳು ಲೀರ‍್ಸ್ ಎಕ್ಸ್ಲ್ ಡೆವಲೆಪ್‌ಮೆಂಟ್ ಪ್ರೋಗ್ರಾಮ್ (ಲೀಡ್) ಅಡಿಯಲ್ಲಿ ಹರಿಹರ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಬಿರು ಬೇಸಿಗೆಯಿಂದ ಬಳಲಿದ ಬಾನಾಡಿಗಳಿಗೆ ಕಾಳು ಮತ್ತು ನೀರನ್ನು ಬಳಕೆ ಮಾಡಿದ ಹಳೆ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಇರಿಸಿ ಮರಕ್ಕೆ ನೇತು ಹಾಕುವ ಮೂಲಕ ಮಾನವೀಯತೆ ಮರೆದಿದ್ದಾರೆ.
ಬಳಸಿದ್ದು ಹಳೆ ಪ್ಲಾಸ್ಟಿಕ್ ಬಾಟಲ್ ಮತ್ತು ಮನೆಯಿಂದ ಸಂಗ್ರಹಿಸಿದ ಆಹಾರ ಧಾನ್ಯಗಳು:
ಲೀಡ್ ವಿದ್ಯಾರ್ಥಿಗಳು ನಗರದ, ಹರಿಹರೇಶ್ವರ ದೇವಸ್ಥಾನ, ರಾಜಾರಾಂ ಕಲೋನಿ ಹಾಗೂ ವಿದ್ಯಾನಗರಗಳಲ್ಲಿ ಸಂಚರಿಸಿ ಮನೆ ಮನೆಯಿಂದ ಆಹಾರ ಧಾನ್ಯಗಳು ಮತ್ತು ಬಳಸಿದ ಹಳೆ ಪ್ಲಾಸ್ಟಿಕ್ ಬಾಟಲ್ಗಳನ್ನು ಸಂಗ್ರಹಿಸಿ ಹೊಸ ರೂಪ ನೀಡಿ ಬಸವಳಿದ ಬಾನಾಡಿಗಳಿಗೆ ನೀರುಣಿಸುವ ಕಾಯಕದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಕಾರ್ಯಕ್ರಮ ಸಂಯೋಜಕ ಕೃಷ್ಣಾಜಿ ಮೋರೆ “ಬೇಸಿಗೆಯ ಈ ದಿನಗಳಲ್ಲಿ ಪರಿಸರ ಮತ್ತು ಪಕ್ಷಿ ಸಂಕುಲದ ರಕ್ಷಣೆ ಮಾಡುವುದು ನಮ್ಮಂತಹ ಯುವಕರ ಕಾರ್ಯ ಹಾಗೂ ಮಾನವೀಯತೆಯ ಪ್ರತೀಕ ಎಂದು ಅಭಿಪ್ರಾಯಪಟ್ಟರು.
ಈ ಅಬಿಯಾನಲ್ಲಿ ಮಾತಾನಾಡಿದ ಲೀಡ್ ಸಹಾಯಕ ಸಂಯೋಜಕ ಹಾಗೂ ಶಿಕ್ಷಕ ಸಂತೋಷಕುಮಾರ್. ಪಿ, ಮನುಷ್ಯರಾದರೆ ನೀರು ಕೇಳಿ ದಾಹ ತಿರಿಸಿಕೋಳ್ಳುತ್ತೇವೆ, ಆದರೆ ಮೌನಿಯಾದ ಹಕ್ಕಿಗಳು ಯಾರನ್ನು ಬೇಡುವುದಿಲ್ಲ, ಆದ್ದರಿಂದ ಪ್ರತಿ ಮನೆಯ ಚಾವಣಿ ಮೇಲೆ ಕಾಳು – ನೀರು ಇಟ್ಟು ಹಕ್ಕಿಗಳ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಮಾನವಿಯತೆ ಮೆರೆಯಬೇಕು ಎಂದು ತನ್ನ ಮಾತುಗಳನ್ನು ಹಂಚಿಕೊAಡರು. ಜೊತೆಗೆ ಲೀಡ್ ವಿದ್ಯಾರ್ಥಿಗಳು ಮತ್ತು ಶ್ರೀಮತಿ ಗಿರಿಯಮ್ಮ ಆರ್ ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ಬಿ ಗಂಗಾಧರಪ್ಪ, ಪ್ರಾಧ್ಯಾಪಕರಾದ ರೋಹಿಣಿ ಶಿರಹಟ್ಟಿ ಹಾಗೂ ಸಿಬ್ಬಂಧಿವರ್ಗ ಇವರು ಉಪಸ್ಥಿತರಿದ್ದರು.