ಸೋನಿಯಾ ರಾಜಕೀಯ ನಿವೃತ್ತಿ? ಸುಳಿವು ನೀಡಿದ ಕಾಂಗ್ರೆಸ್ ಅಧಿನಾಯಕಿ

ಸೋನಿಯಾ ರಾಜಕೀಯ ನಿವೃತ್ತಿ? ಸುಳಿವು ನೀಡಿದ ಕಾಂಗ್ರೆಸ್ ಅಧಿನಾಯಕಿ

ರಾಯ್‌ಪುರ: ‘ನನಗೆ ಅತ್ಯಂತ ಸಂತೋಷಕರ ಸಂಗತಿಯೆಂದರೆ, ನನ್ನ ಇನ್ನಿಂಗ್ಸ್ ಭಾರತ್ ಜೋಡೊ ಯಾತ್ರೆಯೊಂದಿಗೆ ಮುಕ್ತಾಯವಾಗಬಹುದು. ಇದು ಪಕ್ಷಕ್ಕೆ ಮಹತ್ವದ ತಿರುವು ನೀಡಲಿದೆ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಈ ಮೂಲಕ ಅವರು ರಾಜಕೀಯ ನಿವೃತ್ತಿಯ ಸುಳಿವ ನೀಡಿದ್ದಾರೆ ಎನ್ನಲಾಗಿದೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ್ ಜೋಡೊ ಯಾತ್ರೆಯೊಂದಿಗೆ ನನ್ನ ಇನ್ನಿಂಗ್ಸ್ ಮುಕ್ತಾಯವಾಗಬಹುದು ಎಂದು ಹೇಳಿದ್ದಾರೆ.
2004 ಮತ್ತು 2009ರ ಡಾ. ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವ ಮತ್ತು ಭಾರತ್ ಜೋಡೊ ಯಾತ್ರೆ ನನಗೆ ವೈಯಕ್ತಿಕ ತೃಪ್ತಿ ನೀಡಿದೆ. ದೇಶದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದನ್ನು ಭಾರತ್ ಜೋಡೊ ಯಾತ್ರೆ ಸಾಬೀತುಪಡಿಸಿದೆ ಎಂದು ಸೋನಿಯಾ ತಿಳಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯ ನಾಯಕತ್ವ ವಹಿಸಿದ್ದ ರಾಹುಲ್‌ ಗಾಂಧಿ ಅವರಿಗೆ ವಿಶೇಷ ಧನ್ಯವಾದ ಹೇಳುತ್ತೇನೆ. ಏಕೆಂದರೆ ಯಾತ್ರೆಯ ಮೂಲಕ ಕಾಂಗ್ರೆಸ್ ಜನರೊಂದಿಗೆ ನಿಂತಿದೆ. ಜನರಿಗಾಗಿ ಸದಾ ಹೋರಾಡಲು ಸಿದ್ಧವಿದೆ ಎಂಬುದನ್ನು ತೋರಿಸಿದ್ದಾರೆ. ಜತೆಗೆ, ಯಾತ್ರೆಯ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!