ದಾವಣಗೆರೆ :ಇದೇ ಫೆ.24ರಂದು ರಾಜ್ಯಾದ್ಯಂತ `ಸೌತ್ ಇಂಡಿಯನ್ ಹಿರೋ’ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ನರೇಶ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ, ಬೆಂಗಳೂರು ಹಾಗೂ ಮಂಡ್ಯ ಸುತ್ತ ಮತ್ತಲ ಪ್ರದೇಶಗಳಲ್ಲಿ ಚಿತ್ರೀಕರಣವಾಗಿದ್ದು, ಇದೊಂದು ಪ್ರೇಮಕಥೆಯಾಗಿದೆ ಎಂದರು.
ಚಿಕ್ಕ ಊರಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿರುವ ನಾಯಕ ಹೇಗೆ ಚಲನಚಿತ್ರೋದ್ಯಮದಲ್ಲಿ ಸೂಪರ್ ಸ್ಟಾರ್ ಆಗುತ್ತಾನೆಂಬ ಕುರಿತ ಕಥೆ ಈ ಚಿತ್ರದಲ್ಲಿದೆ ಎಂದು ವಿವರಿಸಿದರು.
ಚಿತ್ರದ ನಾಯಕ ಸಾರ್ಥಕ್, ನಾಯಕ ನಟಿ ಕಾಶಿಮಾ ರಫಿ, ಸಹನಟ ಅಮಿತ್ ಚಿತ್ರದ ಕುರಿತು ಮಾತನಾಡಿದರು.
