ಪತ್ರಕರ್ತನ ಮೇಲೆ ದರ್ಪ ತೋರಿಸಿದ್ರಾ ಎಸ್ ಪಿ ರಿಷ್ಯಂತ್.? ಗೃಹ ಸಚಿವರ ಮುಂದೆ ಘಟನೆ ವಿವರಿಸಿದ ಪತ್ರಕರ್ತ ಹಾಲಸ್ವಾಮಿ

ಪತ್ರಕರ್ತನ ಮೇಲೆ ದರ್ಪ ತೋರಿಸಿದ್ರಾ ಎಸ್ ಪಿ ರಿಷ್ಯಂತ್.?
ಶಿವಮೊಗ್ಗ: ಶಿವಮೊಗ್ಗದಲ್ಲಿ ಸೋಮವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ವರನ್ನ ಭಯೋತ್ಪಾದಕರ ರೀತಿಯಲ್ಲಿ ನಡೆಸಿಕೊಂಡ ಘಟನೆ ನಡೆದಿದೆ.
ಪತ್ರಕರ್ತ ಹಾಲಸ್ವಾಮಿಯನ್ನ ಪೊಲೀಸರು ಭಯೋತ್ಪಾದಕರ ರೀತಿ ನಡೆಸಿಕೊಂಡು ಒಂದು ಗಂಟೆಗೂ ಅಧಿಕ ಸಮಯ ವಾಹನದಲ್ಲಿ ಕೂರಿಸಿಕೊಂಡು ಕಿರಿಕಿರಿ ಮಾಡಿದ್ದಾರೆ.
ಪತ್ರಿಕೆಯವರು ಎಂದು ಹೇಳಿದರೂ ಮೊಬೈಲ್ ಕಸಿದುಕೊಂಡು ಆ ಕೇಸ್ ಹಾಕ್ತೀನ ಈ ಕೇಸ್ ಹಾಕ್ತೀನಿ ಎಂದು ಹೇಳುವ ಮೂಲಕ ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಅಂಗವನ್ನ ಆಪೋಷನ ತೆಗೆದುಕೊಳ್ಳುವ ಹಾಗೆ ನಡೆದುಕೊಂಡಿದ್ದಾರೆ.
ಅತಿಕ್ರಮಣ ಪ್ರವೇಶ, ಎಸ್ ಪಿ ಜಿ ನಿಯಮಾವಳಿ ಉಲ್ಲಂಘನೆ ಎಂದು ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಮೊಬೈಲ್ ಕಸಿದುಕೊಂಡಿದ್ದಾರೆ. ಪೊಲೀಸ್ ವ್ಯಾನ್ ನಲ್ಲಿ ಕೂರಿಸಲು ತಮ್ಮಕೈಕೆಳಗಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅದರಂತೆ ಪತ್ರಕರ್ತ ಹಾಲಸ್ವಾಮಿಯನ್ನ ವಾಹನದಲ್ಲಿ ಕೂರಿಸಿದ್ದಾರೆ.
ಒಂದು ಗಂಟೆಗೂ ಅಧಿಕ ಕೂರಿಸಿಕೊಂಡು ಅಧಿಕಾರಿಯ ಮುಂದೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕೂರ್ತಿಯಾ ಎಂದ ಎಂದು ಪತ್ರಿಕೋಧ್ಯಮದ ಬೋಧನೆ ಮಾಡಿದ್ದಾರೆ. ಅಧಿಕಾರಿಗಳ ದರ್ಪ ತೋರಿದ್ದಾರೆ. ಬೋಧನೆಯ ನಂತರ ಬಿಡುವಾಗ ಮೊಬೈಲ್ ನಲ್ಲಿದ್ದ ಎಲ್ಲಾ ವಿಡಿಯೋಗಳನ್ನ ಡಿಲೀಟ್ ಮಾಡಿ ಕಳುಹಿಸಿದ್ದಾರೆ.
ಈ ಘಟನೆಯನ್ನ ಗೃಹ ಸಚಿವರ ಮುಂದೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಲಾಗಿದೆ. ಕಥೆ ಕೇಳಿದ ಗೃಹ ಸಚಿವರು ಏನು ಕ್ರಮ ಜರುಗಿಸಲಿದ್ದಾರೆ ಕಾದು ನೋಡಬೇಕಿದೆ.
ಪತ್ರಕರ್ತನ ಮೇಲೆ ಎಸ್ಪಿ ರಿಷ್ಯಂತ್ ಅವರ ಉದ್ಧಟತನ ಖಂಡಿಸಿ ಐಜಿಪಿಗೆ ಮನವಿಯನ್ನ ದಾವಣಗೆರೆ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಲಿದ್ದಾರೆ.
ಫೆ.27ರಂದು ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಹಾಲಸ್ವಾಮಿ ಅವರ ಮೇಲೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಲ್ಲೆ ಮಾಡಿ ಪೊಲೀಸ್ ವ್ಯಾನಿನಲ್ಲಿ ಅಕ್ರಮವಾಗಿ ಬಂಧಿಸಿ ಅವರ ಮೊಬೈಲ್‌ನ್ನು ಕಿತ್ತುಕೊಂಡು ವಿಡಿಯೋಗಳನ್ನು ಡಿಲಿಟ್ ಮಾಡಿ ದೌರ್ಜನ್ಯವೆಸಗಿರುವುದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ.
ಆಗಿಂದಾಗ್ಗೆ ಕಾರ್ಯನಿರತ ಪತ್ರಕರ್ತರ ಮೇಲೆ ದೌರ್ಜನ್ಯಗಳು, ಹಲ್ಲೆಗಳು ನಡೆಯುತ್ತಿರುವುದನ್ನು ನಾವುಗಳು ಗಂಭೀರವಾಗಿ ಪರಿಗಣಿಸಬೇಕು. ಶಿವಮೊಗ್ಗ ಪ್ರಕರಣದಲ್ಲಿ ಹಾಲಸ್ವಾಮಿಯವರ ಮೇಲೆ ದೌರ್ಜನ್ಯವೆಸಗಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು ಶಿಸ್ತುಕ್ರಮ ಜರುಗಿಸಬೇಕು ಎಂದು ದಾವಣಗೆರೆ ಜಿಲ್ಲಾ ಘಟಕ ಒತ್ತಾಯಿಸುತ್ತದೆ.
ಸದರಿ ಘಟನೆಯನ್ನು ಖಂಡಿಸಿ ಶಿಸ್ತು ಕ್ರಮ ಕೈಗೊಳ್ಳಲು ಪೂರ್ವವಲಯ ಐಜಿಪಿ ಅವರ ಕಛೇರಿಗೆ 2-3-2023ರ ಗುರುವಾರ ಸಂಜೆ 4 ಗಂಟೆಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.