ಹೊಸ ನಾಯಕತ್ವಕ್ಕಾಗಿ ಕಾಂಗ್ರೆಸ್ ನಲ್ಲಿ ಚುನಾವಣೆ : ದೊಡ್ಡವರ ಮಕ್ಕಳ ನಡುವೆ ಕಾಮನ್ ಮ್ಯಾನ್ ‘ಅಬು ತಾಹಿರ್ ಪಿ.’ ಸ್ಪರ್ಧೆ

ದಾವಣಗೆರೆ : ದಾವಣಗೆರೆ ಕಾಂಗ್ರೆಸ್ ಗೆ ಈಗಾಗಲೇ ಮೊದಲ ಹಂತದ ನಾಯಕರು ಇದ್ದು, ಎರಡನೇ ಹಂತದ ನಾಯಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆ ಹುಡುಕಾಟದಲ್ಲಿ ಸಾಕಷ್ಟು ಜನರು ಇದ್ದರೂ, ಪಕ್ಷಕ್ಕಾಗಿ ದುಡಿದವರು ಕೆಲವೇ ಮಂದಿಯಾಗಿದ್ದು, ಅದರಲ್ಲಿ ಇಲ್ಲೊಬ್ಬರು ವಿಶೇಷ ವ್ಯಕ್ತಿಯಾಗಿದ್ದಾರೆ.

ಹೌದು…ದಾವಣಗೆರೆ ಜಿಲ್ಲೆಯ ಹರಿಹರದ ಪಿ.ಅಬು ತಾಹಿರಾ ಎಂಬುವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದು, ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ. ಪಕ್ಷಕ್ಕೆ, ಪಕ್ಷದ ನಾಯಕರಿಗೆ ಧಕ್ಕೆ ಬಂದಾಗ ಅಬು ತಾಹಿರಾ ಹೋರಾಟಕ್ಕೆ ಇಳಿಯುತ್ತಾರೆ‌‌. ಅಲ್ಲದೇ ಎದುರಾಳಿ ನಾಯಕರಿಗೆ ಅವರು ಟಾಂಗ್ ಕೊಡುವುದರಲ್ಲಿ ಸದಾ ಮುಂದು. ದೊಡ್ಡ ಮಟ್ಟದ ಕಾಂಗ್ರೆಸ್ ನಾಯಕರ ನಡುವೆ ಎಲೆ ಮರೆಕಾಯಿಯಂತೆ ಇರುವ ಅಬು ತಾಹಿರ್, ಕಾಂಗ್ರೆಸ್ ಗೆ ದುಡಿಯುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿರುವ ತಾಹಿರ್ ದಾವಣಗೆರೆ ಲೋಕಾಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೇ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

ಹಾನಗಲ್ ಉಪ ಚುನಾವಣೆಯಲ್ಲಿ ಕೆಲಸ ಮಾಡಿರುವ ಇವರು ಸ್ಥಳೀಯ ಮಟ್ಟದಲ್ಲಿಯೂ ಕೆಲಸ ಮಾಡಿದ್ದಾರೆ. ಹರಿಹರದ ವಿಧಾನಸಭಾ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ನಗರಸಭೆ ಸೇರಿದಂತೆ ಇತರೆಡೆ ಕಾಂಗ್ರೆಸ್ ಪರ ಕೆಲಸ ಮಾಡಿದ್ದು, ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಬಿಜೆಪಿ ನಾಯಕರ ವಿರುದ್ಧ ಕೂಡ ಅವರು ನಾನಾ ಸಮಯದಲ್ಲಿ ಹೋರಾಟ ನಡೆಸಿದ್ದಾರೆ. 10 ದಿನಗಳ ಕಾಲ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಪಕ್ಷದ ನಾಯಕ ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಇನ್ನು ರಕ್ಷಾ ರಾಮಯ್ಯ ಲೋಕ ಸಭೆ ಚುನಾವಣೆಯಲ್ಲಿಯೂ ಅಬು ತಾಹಿರಾ ಕೆಲಸ ಮಾಡಿದ್ದಾರೆ. ಹೀಗೆ ಹತ್ತಾರು ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ.

ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ

ಅಬು ತಾಹಿರ್ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಇವರ ಕ್ರಮ ಸಂಖ್ಯೆ 35 ಆಗಿದ್ದು, ಅತಿರಥ ಮಹಾರಥರ ನಡುವೆ ಕಾಮನ್ ಮ್ಯಾನ್ ಆಗಿ ಸ್ಪರ್ಧೆಯೊಡ್ಡಿದ್ದಾರೆ.

ದೊಡ್ಡವರ ಮಕ್ಕಳು ಸ್ಪರ್ಧೆ

ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಾಜಿ ಶಾಸಕ ಗೋಪಾಲ ಪೂಜಾರಿಯವರವರ ಪುತ್ರ ಸೂರಜ್, ಸತೀಶ್‌ ಜಾರಕಿಹೊಳೆ ಪುತ್ರ ರಾಹುಲ್ ಜಾರಕಿಹೊಳೆ, ಶಿವನಾಂದ್ ಪಾಟೀಲ್ ರವರವ ಪುತ್ರ ಸತ್ಯಜಿತ್ ಪಾಟೀಲ್, ಮಾಲುರು ನಂಜೇಗೌಡ ಪುತ್ರ ಸುನೀಲ್‌ ಗೌಡ, ಪೂರ್ಣಿಮಾ ಶ್ರೀನಿವಾಸ ಪುತ್ರ ಬ್ರಿಜೆಷ್ ಯಾದವ್, ಆರ್.ಬಿ ತಿಮ್ಮಾಪುರ ಪುತ್ರ ವಿನಯ್ ತಿಮ್ಮಾಪುರ ರೊಂದಿಗೆ ಕಳೆದ ಬಾರಿ ಉಡುಪಿ ಜಿಲ್ಲಾ ಉಪಾಧ್ಯಕ್ಷೆಯಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆಯಾಗಿದ್ದ ಸುರೈಯ್ಯ ಅಂಜುಮ್ ಹೆಸರು ಪೈಪೋಟಿಯಲ್ಲಿ ಕೇಳಿಬಂದಿದ್ದು, ಇವರೆಲ್ಲರವರ ನಡುವೆ ಅಬು ತಾಹಿರ್ ಸ್ಪರ್ಧೆ ಮಾಡಿದ್ದಾರೆ.

ಸ್ಫರ್ಧೆ ಮಾಡೋರಿಗೆ ಈ ಕ್ವಾಲಿಟಿ ಇರಬೇಕು

“ಯುವಕರು ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಾಯಕರಾಗಲು ಬಯಸಿದರೆ, ಅವರು ನಾಯಕತ್ವದ ಗುಣಗಳನ್ನು ಪಡೆದುಕೊಳ್ಳಬೇಕು ಮತ್ತು ಚುನಾವಣೆಗಳ ಮೂಲಕ ನಾಯಕರಾಗಬೇಕು ಮತ್ತು ನೇಮಕಾತಿಗಳಲ್ಲ. ಪಕ್ಷದ ಚುನಾವಣಾ ಆಯೋಗದ ಮೂಲಕ ಪಕ್ಷದ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ,”

ಸೆಪ್ಟೆಂಬರ್ 20 ರಂದು ಕೊನೆ ದಿನ

ಅರ್ಹತೆ : ಯುವ ಕಾಂಗ್ರೆಸ್ ಅಭ್ಯರ್ಥಿಗಳು 35 ವರ್ಷದೊಳಗಿನವರಾಗಿರಬೇಕು ಮತ್ತು ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು. ಸದಸ್ಯತ್ವ ನೋಂದಣಿ ಸಮಯದಲ್ಲಿ ಅರ್ಜಿದಾರರ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ. ಇಡೀ ದೇಶದಲ್ಲಿ ಹೊಸ ನಾಯಕರನ್ನು ಹುಟ್ಟು ಹಾಕುವ ಪ್ರಕ್ರಿಯೆ ಆರಂಭವಾಗಿದ್ದು, ಯುವ ನಾಯಕರನ್ನು ಬೆಳೆಸಲು ನಾಯಕ ರಾಹುಲ್ ಗಾಂಧಿ ಈ ಆಯ್ಕೆ ಪ್ರಕ್ರಿಯೆ ಮಾಡಿದ್ದಾರೆ.
…..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!