ನವಂಬರ್18-19 ರಂದು ಲೋಕಕಲ್ಯಾಣಾರ್ಥ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ

IMG-20211115-WA0100

ದಾವಣಗೆರೆ: ಸ್ಫೂರ್ತಿ ಸೇವಾ ಟ್ರಸ್ಟ್, ಶಾಸ್ತ್ರೀಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಲೋಕಕಲ್ಯಾಣಾರ್ಥ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀಕೃಷ್ಣ ನಾಮಕೀರ್ತನೆ, ಶ್ರೀ ದಾಮೋದರ ದೀಪೋತ್ಸವ, ಶ್ರೀ ತುಳಸಿ ಕಲ್ಯಾಣ ಮುಂತಾದ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮವನ್ನು ನ.18, 19ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಬಿ.ಸತ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಗರದ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಕಾರ್ಯಕ್ರಮ ಜರುಗಲಿವೆ ಎಂದರು.

ಧರ್ಮಶಾಲೆಯ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ ನಡೆಯಲಿದ್ದು, ಛತ್ರದ ಒಳಾಂಗಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ವೇ.ಜಯತೀರ್ಥಾಚಾರ್, ವೇ.ಶಂಕರನಾರಾಯಣ ಶಾಸ್ತಿç ಮತ್ತು ಶಿಷ್ಯ ವೃಂದದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 18ರಂದು ಸಂಜೆ 5.45ಕ್ಕೆ ಗರುಡ ಧ್ವಜಾರೋಹಣ ಇರುತ್ತದೆ. 6 ಗಂಟೆಗೆ 20ನೇ ವರ್ಷದ ಶ್ರೀರಾಮ ತಾರಕ ಜಪಯಜ್ಞ ನಡೆಯಲಿದೆ ಎಂದರು‌.

19ರಂದು ಬೆಳಗ್ಗೆ 8.45ಕ್ಕೆ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ಗಾಯತ್ರಿ ಮಹಾಯಜ್ಞ, ಶ್ರೀ ರಾಮತಾರಕ ಯಜ್ಞಗಳಿಗೆ ಸಂಕಲ್ಪ, ಒಳಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಸಂಕಲ್ಪ, ಮಧ್ಯಾಹ್ನ 12 ಗಂಟೆಗೆ ಯಜ್ಞಗಳ ಪೂರ್ಣಾಹುತಿ, ವೃತದ ಮಹಾಮಂಗಳಾರತಿ ನೆರವೇರಲಿದೆ. ಸಂಜೆ 5.45ಕ್ಕೆ ಶ್ರೀ ತುಳಸಿ ಕಲ್ಯಾಣ, 6.15ಕ್ಕೆ ಶ್ರೀಕೃಷ್ಣನಾಮ ಕೀರ್ತನೆ, ದಾಮೋದರ ದೀಪೋತ್ಸವ, 6.45ಕ್ಕೆ ಕಾರ್ಯಕ್ರಮಗಳ ಸಮಾರೋಪ ಇರುತ್ತದೆ ಎಂದು ಅವರು ತಿಳಿಸಿದರು. ಅದೇ ದಿನ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ಪರಿವಾರದ ಅಧ್ಯಕ್ಷೆ ಡಾ.ಸುಶೀಲಮ್ಮ ವಹಿಸುವರು. ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಉದ್ಘಾಟಿಸುವರು. ಮೇಯರ್ ಎಸ್.ಟಿ.ವೀರೇಶ್, ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀ ತ್ಯಾಗೀಶಾನಂದ ಮಹಾರಾಜ್, ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಅವಧೂತ ಚಂದ್ರದಾಸ್, ಶಾಸ್ತ್ರೀಹಳ್ಳಿ ಅಭಯಾಶ್ರಮದ ಅಧ್ಯಕ್ಷ ಆರ್.ಆರ್.ರಮೇಶಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.

ಸಾಲಿಗ್ರಾಮ ಗಣೇಶ ಶೆಣೈ, ಕೆ.ಹೆಚ್.ಮಂಜುನಾಥ, ಭಾವನ್ನಾರಾಯಣ ಗೋಷ್ಠಿಯಲ್ಲಿ ಹಾಜರಿದ್ದರು.

: ಸ್ಫೂರ್ತಿ ಸೇವಾ ಟ್ರಸ್ಟ್, ಶಾಸ್ತ್ರೀಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಲೋಕಕಲ್ಯಾಣಾರ್ಥ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀಕೃಷ್ಣ ನಾಮಕೀರ್ತನೆ, ಶ್ರೀ ದಾಮೋದರ ದೀಪೋತ್ಸವ, ಶ್ರೀ ತುಳಸಿ ಕಲ್ಯಾಣ ಮುಂತಾದ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮವನ್ನು ನ.18, 19ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಬಿ.ಸತ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಗರದ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಕಾರ್ಯಕ್ರಮ ಜರುಗಲಿವೆ ಎಂದರು.

ಧರ್ಮಶಾಲೆಯ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ ನಡೆಯಲಿದ್ದು, ಛತ್ರದ ಒಳಾಂಗಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ವೇ.ಜಯತೀರ್ಥಾಚಾರ್, ವೇ.ಶಂಕರನಾರಾಯಣ ಶಾಸ್ತಿç ಮತ್ತು ಶಿಷ್ಯ ವೃಂದದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 18ರಂದು ಸಂಜೆ 5.45ಕ್ಕೆ ಗರುಡ ಧ್ವಜಾರೋಹಣ ಇರುತ್ತದೆ. 6 ಗಂಟೆಗೆ 20ನೇ ವರ್ಷದ ಶ್ರೀರಾಮ ತಾರಕ ಜಪಯಜ್ಞ ನಡೆಯಲಿದೆ ಎಂದರು‌.

19ರಂದು ಬೆಳಗ್ಗೆ 8.45ಕ್ಕೆ ಹೊರಾಂಗಣದ ಯಜ್ಞ ಶಾಲೆಯಲ್ಲಿ ಶ್ರೀ ಗಾಯತ್ರಿ ಮಹಾಯಜ್ಞ, ಶ್ರೀ ರಾಮತಾರಕ ಯಜ್ಞಗಳಿಗೆ ಸಂಕಲ್ಪ, ಒಳಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಸಂಕಲ್ಪ, ಮಧ್ಯಾಹ್ನ 12 ಗಂಟೆಗೆ ಯಜ್ಞಗಳ ಪೂರ್ಣಾಹುತಿ, ವೃತದ ಮಹಾಮಂಗಳಾರತಿ ನೆರವೇರಲಿದೆ. ಸಂಜೆ 5.45ಕ್ಕೆ ಶ್ರೀ ತುಳಸಿ ಕಲ್ಯಾಣ, 6.15ಕ್ಕೆ ಶ್ರೀಕೃಷ್ಣನಾಮ ಕೀರ್ತನೆ, ದಾಮೋದರ ದೀಪೋತ್ಸವ, 6.45ಕ್ಕೆ ಕಾರ್ಯಕ್ರಮಗಳ ಸಮಾರೋಪ ಇರುತ್ತದೆ ಎಂದು ಅವರು ತಿಳಿಸಿದರು. ಅದೇ ದಿನ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಯತ್ರಿ ಪರಿವಾರದ ಅಧ್ಯಕ್ಷೆ ಡಾ.ಸುಶೀಲಮ್ಮ ವಹಿಸುವರು. ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಉದ್ಘಾಟಿಸುವರು. ಮೇಯರ್ ಎಸ್.ಟಿ.ವೀರೇಶ್, ರಾಮಕೃಷ್ಣ ಮಿಷನ್ ಅಧ್ಯಕ್ಷ ಶ್ರೀ ತ್ಯಾಗೀಶಾನಂದ ಮಹಾರಾಜ್, ಇಸ್ಕಾನ್ ಸಂಸ್ಥೆಯ ಮುಖ್ಯಸ್ಥ ಅವಧೂತ ಚಂದ್ರದಾಸ್, ಶಾಸ್ತ್ರೀಹಳ್ಳಿ ಅಭಯಾಶ್ರಮದ ಅಧ್ಯಕ್ಷ ಆರ್.ಆರ್.ರಮೇಶಬಾಬು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕಾರ್ಯಕ್ರಮದ ನಂತರ ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.

ಸಾಲಿಗ್ರಾಮ ಗಣೇಶ ಶೆಣೈ, ಕೆ.ಹೆಚ್.ಮಂಜುನಾಥ, ಭಾವನ್ನಾರಾಯಣ ಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!