ರಾಷ್ಟ್ರೀಯ ಕ್ರೀಡಾ ದಿನ ಆಚರಣೆ ಪ್ರಯುಕ್ತ ಕ್ರೀಡಾಕೂಟ ಆಯೋಜನೆ

ದಾವಣಗೆರೆ, ಆ. 22: ಪ್ರತಿ ವರ್ಷದಂತೆ ಆಗಸ್ಟ್ 29 ರಂದು ಮೇಜರ್ ದ್ಯಾನ್‍ಚಂದ್ರರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು (Sports Day) ಆಚರಿಸಲಾಗುತ್ತಿದ್ದು, ಸ್ಥಳೀಯ ಪ್ರಚಲಿತ  ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯನ್ನು (sports) ಆಗಸ್ಟ್ 24 ರಂದು ನಗರದ ಎಸ್.ಎಸ್ ಲೇಔಟ್‍ನಲ್ಲಿರುವ ಶ್ರೀ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಬೇಕು( ಶ್ರೀ ಶ್ರೀಶೈಲ ಎಸ್ ಮೊ.ನಂ: 9448667255)

ರಸ್ತೆ ಓಟ (ಪುರುಷ-6ಕಿ.ಮೀ) (ಮಹಿಳೆ–3ಕಿ.ಮೀ) ಕ್ರೀಡೆ ಆಗಸ್ಟ್ 25 ರಂದು ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗುತ್ತದೆ ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು.( ವಿನೋದ್‍ಕುಮಾರ್. ಕೆ. ಮೊ.ನಂ: 8971388143)

Scheduled caste; ಜಿಮ್ ತೆರೆಯಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಹಗ್ಗ ಜಗ್ಗಾಟ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 7.30 ಗಂಟೆಗೆ ವರದಿ ಮಾಡಿಕೊಳ್ಳಬೇಕು.( ರಾಮಲಿಂಗಪ್ಪ. ಜೆ ಮೊ.ನಂ: 9480796263)

ಖೋ-ಖೋ ಕ್ರೀಡೆಯನ್ನು ಆಗಸ್ಟ್ 29 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು, ಬೆಳಿಗ್ಗೆ 9.30 ಗಂಟೆಗೆ ವರದಿ ಮಾಡಿಕೊಳ್ಳಬೇಕು(ಸುನೀತಾ ಎಂ.ಸಿ. ಮೊ.ನಂ: 9972464313)

interview; ಆ.23ರಂದು ವಾಕ್ ಇನ್ ಇಂಟರ್ವ್ಯೂ

ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಸಂಘಟಿಸಲಾಗುವುದು. ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣಭತ್ಯೆ& ದಿನ ಭತ್ಯೆ ಇರುವುದಿಲ್ಲ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಹರ್ಷ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!