ಮೋದಿಯವರ ಮಾತೆಯ ನಿಧನಕ್ಕೆ ಶ್ರೀಶೈಲ ಜಗದ್ಗುರುಗಳ ಸಂತಾಪ

ಶ್ರೀಶೈಲಂ: ದೇಶದ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿಯವರ ಮಾತೋಶ್ರೀಯವರಾದ ಶ್ರೀಮತಿ ಹೀರಾಬೆನ್ ಮೋದಿಯವರು ನಿಧನರಾದದ್ದು, ತೀವ್ರ ಕಳವಳಕಾರಿ ಸಂಗತಿಯಾಗಿದೆ. ನಮ್ಮ ಮಕ್ಕಳು ನಮ್ಮನ್ನು ನಮ್ಮ ಪರಿವಾರವನ್ನು ಕಾಪಾಡಬೇಕು ಮತ್ತು ಸೇವೆ ಮಾಡಬೇಕೆಂದು ಎಲ್ಲ ತಾಯಂದಿರರು ಬಯಸುತ್ತಾರೆ. ಆದರೆ ಇವರು ತನ್ನ ಮಗನು ರಾಷ್ಟ್ರಸೇವೆ ಮಾಡಬೇಕು ಮತ್ತು ತನ್ನನ್ನು ತಾನು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳಬೇಕೆಂದು ತನ್ನ ಮಗನನ್ನು ರಾಷ್ಟ್ರದ ಸೇವೆಗೆ ಸಮರ್ಪಿಸಿದ ಅಪರೂಪದ ತ್ಯಾಗಮಯಿ ತಾಯಿಯಾಗಿದ್ದಾರೆ. ಆದ್ದರಿಂದ ಇವರ ನಿಧನಕ್ಕೆ ಇಂದು ರಾಷ್ಟ್ರವೇ ಕಂಬನಿ ಹಾಕುತ್ತಿದೆ.

ಇಂತಹ ಶ್ರೇಷ್ಠ ತಾಯಿಯ ಆತ್ಮ ಇಂದು ಪರಮಾತ್ಮನಲ್ಲಿ ಒಂದಾಗಿದ್ದು, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಅನುಗ್ರಹಿಸಲಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರಾದಿಯಾಗಿ ಈ ಮಾತೆಯವರ ಎಲ್ಲ ಪರಿವಾರದವರಿಗೆ ಈ ಮಾತೆಯ ವಿಯೋಗದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇವೆ

Leave a Reply

Your email address will not be published. Required fields are marked *

error: Content is protected !!