ಎಸ್.ಎಸ್. ಮಲ್ಲಿಕಾರ್ಜುನ್ ಸಾಲ 23.60 ಕೋಟಿ ರೂ.
ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿರುವ ವೇಳೆ ತಮ್ಮ ಆಸ್ತಿಗಳ ವಿವರ ಬಹಿರಂಗ ಪಡಿಸಿದ್ದು, 23.60 ಕೋಟಿ ರೂ. ಸಾಲ ಇರುವುದಾಗಿ ತೋರಿಸಿದ್ದಾರೆ.
ಸದ್ಯ ಅವರ ಹೆಸರಿನಲ್ಲಿ 9.79 ಕೋಟಿ ರೂ.ಚರಾಸ್ತಿ, 27.28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, ಅದರ ಇಂದಿನ ಮೌಲ್ಯ 152.7 ಕೋಟಿ ರೂಪಾಯಿಗಳಾಗಿದೆ.
ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಹೆಸರಲ್ಲಿ 17.38 ಕೋಟಿ ರೂ. ಚರಾಸ್ತಿ, 9.03 ಕೋಟಿ ರೂ. ಸ್ಥಿರಾಸ್ತಿ, 97.28 ಲಕ್ಷ ರೂ. ಸಾಲ ಇದೆ.
2017-18ರಲ್ಲಿ ಮಲ್ಲಿಕಾರ್ಜುನ ಅವರು 20.34 ಕೋಟಿ ಆದಾಯ ತೋರಿಸಿದ್ದರೆ, ಈ ಬಾರಿ 2021–22ರಲ್ಲಿ 2.07 ಕೋಟಿ ಆದಾಯಕ್ಕೆ ಇಳಿದಿದೆ ಎಂದು ತೋರಿಸಲಾಗಿದೆ. ಕಳೆದ ವರ್ಷ ಅವರು ಬ್ಯಾಂಕ್ ಹಾಗೂ ಇತರೆ ಹಣಕಾಸು ಸಂಸ್ಥೆಗಳಿಂದ ಸುಮಾರು 23.25 ಕೋಟಿ ಸಾಲ ಪಡೆದಿದ್ದಾಗಿ ಹೇಳಿದ್ದರು.
ಕಳೆದ ವರ್ಷ ಅವರು ಸಲ್ಲಿಸಿದ್ದ ಆಸ್ತಿಯ ಅಂದಿನ ಮೌಲ್ಯ 113 ಕೋಟಿ ರೂಪಾಯಿಗಳಾಗಿತ್ತು.