ಹಿರಿಯ ಪತ್ರಕರ್ತ ಕೌರವ ಪತ್ರಿಕೆಯ ಹಿರಿಯ ವರದಿಗಾರ ಮಾಲತೇಶ ಅಂಗೂರಗೆ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸಿ

IMG-20211225-WA0005

 

ಹಾವೇರಿ: ಇಲ್ಲಿನ ಹಿರಿಯ ಪತ್ರಕರ್ತರಾಗಿರುವ ಕೌರವ ಪತ್ರಿಕೆಯ ಹಿರಿಯ ವರದಿಗಾರ ಮಾಲತೇಶ ಅಂಗೂರ ಸೇರಿದಂತೆ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅನೇಕ ಹಿರಿಯ ಪತ್ರಕರ್ತರನ್ನು ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನಿಂದ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿರುವ ನಾಡಿನ ಹಿರಿಯ ಪತ್ರಕರ್ತರಿಗೆ ನೀಡುವ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಡಿ. ೨೭ ರಂದು ಮಲ್ಲೇಶ್ವರಂ ಬಳಿಯಿರುವ ಪ್ರಸಿದ್ಧ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಕಳೆದ ೩೨ ವರ್ಷಗಳಿಂದ ಪತ್ರಕರ್ತರಾಗಿ, ನಾಡಿನ ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯವ ಮೂಲಕ ಪತ್ರಿಕೋಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಾಲತೇಶ ಅಂಗೂರ ಅವರ ವನ್ಯಜೀವಿ ಛಾಯಾಗ್ರಾಹಕರಾಗಿ ವನ್ಯಜೀವಿ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಇವರು ಸೆರೆಹಿಡಿದಿರುವ ವನ್ಯಜೀವಿ ಛಾಯಾಚಿತ್ರಗಳು ನಾಡಿನ ಪ್ರಮುಖಪತ್ರಿಕೆಗಳಲ್ಲಿ ಹಾಗೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲೂ ಸಹ ಪ್ರಕಟವಾಗಿವೆ.

“ಬಣ್ಣದಗರಿ” “ಹಾವೇರಿಯಾಂವ್” ಎನ್ನುವ ಎರಡು ಕೃತಿಗಳನ್ನು ಸಾಹಿತ್ಯಕ್ಷೇತ್ರಕ್ಕೆ ನೀಡಿದ್ದಾರೆ. ಇವರ ಬಣ್ಣದಗರಿ ಕೃತಿಗೆ ಕಾಸರಗೋಡಿನ ಕರಾವಳಿ ಪ್ರತಿಷ್ಠಾನದ ಪ್ರಶಸ್ತಿ, “ಹಾವೇರಿಯಾಂವ್” ಕೃತಿಗೆ ಮೈಸೂರಿನ ಎನ್.ಎಸ್.ವಾಮನ್ ಪ್ರಶಸ್ತಿ ಲಭಿಸಿದೆ. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅಂಗೂರ ಅವರು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರಿಗೆ ವಿವಿಧ ಪ್ರಶಸ್ತಿಗಳೂ ಲಭಿಸಿವೆ.

ಡಿ. ೨೭ ರಂದು ಬೆಳಿಗ್ಗೆ ೧೦-೩೦ಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹರ್ಷಿ ಡಾ. ಆನಂದ ಗುರೂಜಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ನಾಗಾಭರಣ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಯಾದ ಆಕಾರ್ ಮ್ಯಾಕ್ಸ್ ಎಂ.ಡಿ. ಸ್ನೇಹ ರಾಕೇಶ ಅವರು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!