ಕಲಬುರ್ಗಿ ಯಲ್ಲಿ ನಡೆದ ಪತ್ರಕರ್ತರ ರಾಜ್ಯಮಟ್ಟದ 36ನೇ ಸಮ್ಮೇಳನ ಯಶಸ್ವಿ
ಕಲಬುರ್ಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸರ್ ಅವರ ನೇತೃತ್ವದಲ್ಲಿ ನಡೆದ ಈ ಸಮ್ಮೇಳನವು ಅಚ್ಚುಕಟ್ಟಾಗಿ ಏರ್ಪಾಡಾಗಿತ್ತು. ರುಚಿಕಟ್ಟಾದ ಊಟ, ಉಪಾಹಾರವೂ ಸಖತ್ತಾಗಿತ್ತು.
ಇನ್ನು, ಸಮ್ಮೇಳನ ಸಭಾಂಗಣವೂ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿಗಳಿಂದ ಆಗಮಿಸಿದ್ದ ಪತ್ರಕರ್ತರನ್ನು ಪ್ರೀತಿಯಿಂದ ಸ್ವಾಗತಿಸುವಂತೆ ಸಿಂಗರಿಸಿದ್ದು ಕಣ್ಣಿಗೆ ಹಬ್ಬದಂತಿತ್ತು. ಈ ಸಮ್ಮೇಳನ ಅಚ್ವುಕಟ್ಟಾಗಿ ಏರ್ಪಡಿಸಿದ್ದರ ಹಿಂದೆ ಐದಾರು ತಿಂಗಳ ಶ್ರಮವಂತೂ ಇದ್ದೇ ಇದೆ ಎನ್ನುವುದು ನನ್ನ ಅನಿಸಿಕೆ.
ತೊಗರಿ ಕಣಜ ಕಲುಬುರಗಿಗೆ ಎಲ್ಲಾ ಪತ್ರಕರ್ತರನ್ನು ಆಹ್ವಾನಿಸಿ ಪ್ರೀತಿಯಿಂದ ಆತಿಥ್ಯವನ್ನು ನೀಡಿದ ಕಲಬುರಗಿ ಜಿಲ್ಲೆಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಸೇರಿ ಎಲ್ಲಾ ಪದಾಧಿಕಾರಿಗಳು ಹಾಗೂ ಊಟ, ಉಪಾಹಾರ ನೀಡಿದ ಸ್ವಯಂ ಸೇವಕರು ಸೇರಿ ಕಲಬುರಗಿ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುವೆ.
ಅದೇರೀತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಸರ್ ಮತ್ತು ಎಲ್ಲಾ ಪದಾಧಿಕಾರಿಗಳ ಶ್ರಮ ಮತ್ತು ಕ್ರಿಯಾಶೀಲತೆಯಿಂದ ಕಲಬುರಗಿಯಲ್ಲಿ ಪತ್ರಕರ್ತರ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು ಎಂದು ಹೇಳಲು ಹೆಮ್ಮೆ ಅನಿಸುತ್ತದೆ.