ಜ.೩ಕ್ಕೆ ರಾಜ್ಯ ಅಲೆಮಾರಿ ಜನಾಂಗಗಳ ರಾಜ್ಯಮಟ್ಟದ ಸಾಹಿತ್ಯ ಸಾಂಕೃತಿಕ ಕಲೋತ್ಸವ

ದಾವಣಗೆರೆ: ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಹಿಂದುಳಿದ ವರ್ಗಗಳ ಪ್ರವರ್ಗ ೧ ಜನಾಂಗಗಳ ಒಕ್ಕೂಟದ ರಾಜ್ಯ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಕಲೋತ್ಸವ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಜನವರಿ ೩ ರಂದು ಬೆಳಗ್ಗೆ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ ೯:೩೦ ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಯಾದವ ಸಮಾಜದ ಅಧ್ಯಕ್ಷ ಎಸ್.ತೀಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಸಿದ್ದರಮಯ್ಯ ಲಾಂಛನ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೇನಿವಾಸ್ ಪೂಜಾರಿ ಪ್ರತಿಭಾ ಪುರಸ್ಕಾರ ನೀಡುವರು. ಇಂಧನ ಸಚಿವ ವಿ.ಸುನೀಲ್ ಕುಮಾರ್ ಆಗಮಿಸಲಿದ್ದಾರೆ. ಒಕ್ಕೂಟದ ಅಧ್ಯಕ್ಷ ತುಕಾರಾಂ ನಾಗಪ್ಪ ವಾಷ್ಕರ್ ಅಧ್ಯಕ್ಷತೆ ವಹಿಸುವವರು ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ.ದೇವೇಗೌಡ, ಎಂ. ಕೃಷ್ಣಪ್ಪ, ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ, ಕೆ.ಟಿ.ಸುವರ್ಣ, ಡಾ.ಎಂ.ವಿ.ಪ್ರಸಾದ್‌ಬಾಬು , ಎಚ್.ಕಾಂತರಾಜ, ಡಾ.ಎ.ಎಚ್.ಬಸವರಾಜು , ಸಿ.ರಾಜಣ್ಣ ಪ್ರಿಯಾಕೃಷ್ಣ , ಗಾದೆಪ್ಪ ಪೂಜಾರಿ, ಬಾಬು ಪತ್ತಾರ್, ಡಾ.ಮಲ್ಲಿಕಾರ್ಜುನ್ ಮಾನ್ಬಡೆ, ಎನ್. ವಿ.ಮಂಜುಳಾ , ರಾಮಕೃಷ್ಣಪ್ಪ , ಬಿ.ಎಸ್. ಪ್ರಭಾಕರ್ ಆಗಮಿಸಲಿದ್ದಾರೆ ಎಂದರು.
ಅದೇ ದಿನ ಸಂಜೆ ೫ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ , ವಿಧಾನಸಭೆ ಸಭಾಪತಿ ಬಸವರಾಜ್ ಹೊರಟ್ಟಿ , ದೇವೇಂದ್ರನಾಥ್ , ವಸತಿ ಸಚಿವ ವಿ.ಸೋಮಣ್ಣ , ಕಂದಾಯ ಸಚಿವ ಆರ್. ಅಶೋಕ್ , ಕೆ.ಗೋಪಾಲಯ್ಯ , ಬಿ.ಸಿ.ನಾಗೇಶ್ , ಮಸಾಲ ಜಯರಾಮ್ , ಡಿ.ಎಸ್.ಅರುಣ , ನಾಗರಾಜ ಯಾದವ್, ಎಚ್.ಎಸ್.ಶಿವಶಂಕರ್ , ಚೌಡರೆಡ್ಡಿ ತೂಪಲ್ಲಿ ಡಾ.ಸಿ.ಎಸ್.ದ್ವಾರಕನಾಥ್ , ಎಸ್.ನರೇಶ್ ಕುಮಾರ್, ಲಕ್ಷö್ಮಣ ಕೆಂಗಟ್ಟೆ, ತಮ್ಮೇಶಗೌಡ, ಗಿರೀಶ್ ಉಪ್ಪಾರ, ಕುಸುಮ ಹನುಮಂತರಾಯಪ್ಪ ಅಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.