ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ನೀಡಿದ ರೇಣುಕಾಚಾರ್ಯ: ಕೊಟ್ಟ ಮಾತಿನಂತೆ ಮೊಬೈಲ್ ನೀಡಿ ಸಹೃದಯತೆ ಮೆರೆದ ಸಿಎಂ ರಾಜಕೀಯ ಕಾರ್ಯದರ್ಶಿ

ದಾವಣಗೆರೆ: ಸ್ಮಾರ್ಟ್ ಪೋನ್ ಇಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಮೊಬೈಲ್ ನೀಡುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ‌ ಎಂ.ಪಿ.‌ ರೇಣುಕಾಚಾರ್ಯ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದ‌ ಬಿಂದು, ಸುಂಕದಕಟ್ಟೆ ಗ್ರಾಮದ ನರ್ಮದ ಈ ಇಬ್ಬರು ವಿದ್ಯಾರ್ಥಿನಿಯರು ಕಡುಬಡತನವಿರುವ ಕುಟುಂಬದವರಾಗಿದ್ದು, ಮೊಬೈಲ್ ಇಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿತ್ತು. ಇದನ್ನು ಮನಗೊಂಡು ಶಾಸಕ ರೇಣುಕಾಚಾರ್ಯ ಆ ಇಬ್ಬರಿಗೂ ಮೊಬೈಲ್ ನೀಡಿ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.

ಇತ್ತೀಚೆಗಷ್ಟೆ ವಿದ್ಯಾರ್ಥಿನಿಯರಿಗೆ ಮೊಬೈಲ್ ಕೊಡಿಸುವುದಾಗಿ ಭರವಸೆ ನೀಡಿದ್ದ ರೇಣುಕಾಚಾರ್ಯ. ಇಂದು ಕೊಟ್ಟ ಮಾತಿನಂತೆ ಮೊಬೈಲ್ ನೀಡಿ ಸಹೃದಯತೆ ಮೆರೆದಿದ್ದಾರೆ.

ಮೊಬೈಲ್ ಪಡೆದು ಶಾಸಕರ ಸಹೃದಯತೆಗೆ ವಿದ್ಯಾರ್ಥಿನಿಯರು ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ. ಅಲ್ಲದೇ ಸಾರ್ವಜನಿಕ ವಲಯದಲ್ಲೂ ಶಾಸಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!