ಎನ್‌ಎಸ್‌ಯುಐನಿಂದ ವಿದ್ಯಾರ್ಥಿ ಧ್ವನಿ ಸಂವಾದ

ದಾವಣಗೆರೆ: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ನಗರದ ಬಾಪೂಜಿ ಎಂ.ಬಿ.ಎ ಕಾಲೇಜಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿ ಧ್ವನಿ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಅಧ್ಯಕ್ಷರಾದ ಕೀರ್ತಿ ಗಣೇಶ್,ರಾಷ್ಟ್ರೀಯ ಕಾರ್ಯದರ್ಶಿಯಾದ ಮಮತ ನೇರ್ಲಿಗೆ ಅವರುಗಳು ವಿದ್ಯಾರ್ಥಿಗಳ ಜೊತೆ ವಿವಿಧ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.
ಇಂದು ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಮಹತ್ವವನ್ನು ತಿಳಿಸಿದ ಅವರುಗಳು ಭಾರತ ದೇಶದ ಸಂಸ್ಕೃತಿ ಸಂಸ್ಕಾರದ ಬಗೆಗಿನ ಸುಳ್ಳು ಸುದ್ಧಿಗಳಿಗೆ ಪ್ರಾಮುಖ್ಯತೆ ನೀಡದೇ ಇತಿಹಾಸ ಪುಟಗಳನ್ನು ತಿರುವಿ ಹಾಕಿ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದ್ದು, ಎನ್‌ಎಸ್‌ಯುಐನಲ್ಲಿ ತೊಡಗಿಕೊಂಡ ಹಿಂದಿನ ಹಲವಾರು ಮುಖಂಡರು ಉನ್ನತ ಸ್ಥಾನಮಾನ ಗಳಿಸಿದ್ದಾರೆ ಎಂದರು.
ಇದೇ ವೇಳೆ ಮಾಜಿ ಸಂಸದ ದಿ|| ಧ್ರುವನಾರಾಯಣ ಅವರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜವಾಹರ್ ಬಾಲ್ ಮಂಚ್ ರಾಜ್ಯ ಅಧ್ಯಕ್ಷರಾದ ಮೈನುದ್ದೀನ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಾಗರ್ ಎಲ್.ಹೆಚ್., ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ರಹಮತ್ ಪೈಲ್ವಾನ್ ಹಾಗೂ ಎನ್‌ಎಸ್‌ಯುಐ ಜಿಲ್ಲಾ ಪದಾಧಿಕಾರಿಗಳು ಉಪಸ್ಧಿತರಿದ್ದರು.