ಏ.17 ಕ್ಕೆ ಮೆರವಣಿಗೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ: ಮಾಯಕೊಂಡ ಅಖಾಡಕ್ಕೆ ಸವಿತಾಬಾಯಿ ಎಂಟ್ರಿ
ದಾವಣಗೆರೆ :ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾಬಾಯಿ ನಡೆ ನಿಗೂಢವಾಗಿದ್ದುಘಿ, ಅಖಾಡದಲ್ಲಿ ಇರುತ್ತಾರೆಯೋ ಎಂದು ಎಲ್ಲರ ಚಿತ್ತ ಅವರತ್ತ ಇತ್ತುಘಿ. ಆದರೀಗ ಅವರು ದಿಢೀರ್ ಬೆಳವಣಿಗೆಯಲ್ಲಿ ನಿರ್ಧಾರವೊಂದನ್ನು ಕೈಗೊಂಡಿದ್ದುಘಿ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲು ನಿರ್ಧಾರ ಮಾಡಿದ್ದಾರೆ.
ದಾವಣಗೆರೆ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ನಿರ್ಧಾರ ಮಾಡಿದ್ದೇನೆ. ಅಂತೆಯೇ ಏ.17ಕ್ಕೆ ಬೆಳಗ್ಗೆ 10.30ಕ್ಕೆ ಜಯದೇವ ಸರ್ಕಲ್‌ನಿಂದ ಮೆರವಣಿಗೆ ಮೂಲಕ ದಾವಣಗೆರೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಕಾಂಗ್ರೆಸ್ ನನಗೆ ಟಿಕೆಟ್ ನೀಡುವ ವಿಶ್ವಾಸವಿತ್ತುಘಿ. ಆದರೆ ಕೆಲವರಿಂದ ಟಿಕೆಟ್ ಮಿಸ್ ಆಗಿದೆ. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಪ್ರವಾಸ ಮಾಡಿ ಜನರ ಪ್ರೀತಿಗಳಿಸಿದ್ದೇನೆ. ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೇ ಅಂತೆಯೇ ನಾನು ಈಗ ಅಖಾಡ ಇಳಿಯೋದಕ್ಕೆ ರೆಡಿಯಾಗಿದ್ದೇನೆ ಎಂದು ಹೇಳಿದರು.
ಮಾಯಕೊಂಡ ಕ್ಷೇತ್ರಾದ್ಯಂತ ಒಂದು ವರ್ಷದಿಂದ ಓಡಾಡಿದ್ದೇನೆ…ಜನರಿಂದ ಜನರಿಗೋಸ್ಕರ ನನ್ನ ಜೀವನ ಮುಡಾಪುಗಿಟ್ಟಿರುವೆ..ಒಂದು ಬಾರಿ ಅವಕಾಶ ಕೊಡಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಜನರಲ್ಲಿ ಮನವಿ ಮಾಡಿದರು.
ನಾಮ ಪತ್ರ ಸಲ್ಲಿಸಿದ ಬಳಿಕ ಅಣಜಿಯಿಂದ ಪ್ರಚಾರ ನಡೆಸುತ್ತೇನೆ. ಸಮಯಾವಕಾಶ ಕಡಿಮೆ ಇರುವ ಕಾರಣ ಪ್ರತಿ ದಿನ ಹತ್ತು ಹಳ್ಳಿಗಳಿಗೆ ಹೋಗಬೇಕೆಂದಿದ್ದೇನೆ. ಎಲ್ಲ ದಾಖಲು ರೆಡಿಯಾಗಿದ್ದುಘಿ, ನಾಮ ಪತ್ರ ಸಲ್ಲಿಸಲು ಸಿದ್ದಾಳಾಗಿದ್ದೇನೆ. ಇನ್ನೇನೂ ಇದ್ದರೂ ಜನರ ಪ್ರೀತಿಗಳಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಷ್ಟೆ ಕೆಲಸ. ಮಾಯಕೊಂಡದಲ್ಲಿ ಈ ಹಿಂದೆ ನಾಗಮ್ಮ ಕೇಶವಮೂರ್ತಿ ಬಿಟ್ಟರೇ, ಈಗ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇಷ್ಟು ಪುರುಷರ ನಡುವೆ ಸ್ಫರ್ಧಿಯಾಗಿ ನಿಂತಿದ್ದೇನೆ ಜನರ ಆರ್ಶೀವಾದ ಮುಖ್ಯವಾಗುತ್ತದೆ ಎಂದು ವಿವರಣೆ ನೀಡಿದರು.
ಮಹಿಳೆಗೆ ಆತ್ಮಗೌರವವೇ ಮುಖ್ಯ. ಟಿಕೆಟ್‌ಗಾಗಿ ನನ್ನ ತೇಜೋವಧೆ ಮಾಡಲಾಗಿದೆ. ಇಂಥದ್ದಕೆ ಎದೆಗುಂದದೆ ನನ್ನ ಹೋರಾಟ ಮುಂದುವರಿಯಲಿದೆ’. ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವಂತಪ್ಪ ಅವರ ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ನನ್ನ ಚಾರಿತ್ರ್ಯವಧೆ ಮಾಡಲಾಗಿದೆ. ಈ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಇದರಿಂದ ನನ್ನ ಮನೆಯ ಶಾಂತಿ ಕದಡಿದೆ. ಪತಿಯು ವಾರ ಮನೆ ಬಿಟ್ಟು ಹೋಗಿದ್ದರು. ತಾಯಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು’ ಎಂದರು. ಒಟ್ಟಾರೆ ಈಗ ಬಂಡಾಯದ ಬಿಸಿ ಯಾರಿಗೆ ತಟ್ಟಲಿದೆ ಎಂಬುದು ಲಿತಾಂಶ ಬಂದ ಮೇಲೆ ಗೊತ್ತಾಗಲಿದೆ.
ನಾನು ಮಾಯಕೊಂಡ ಕ್ಷೇತ್ರಾದ್ಯಂತ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತಿದ್ದೇನೆ…ಮಹಿಳೆಯರು, ಮುಖಂಡರು, ಶೋಷಿತರ ಬಳಿ ಹೋಗುವೆ..ದ್ವೇಷ ರಾಜಕಾರಣ ಮಾಡದೇ ನನ್ನ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕೆ ಇಳಿಯುತ್ತಿದ್ದೇನೆ..ಹರಸಿ ಆರ್ಶೀವದಿಸಿ.
-ಸವಿತಾಬಾಯಿ, ಮಾಯಕೊಂಡ ಕ್ಷೇತ್ರ