ದಾವಣಗೆರೆಯಲ್ಲಿ ಯಶಸ್ವಿ 50% ದಂಡ ಪಾವತಿ ಅಭಿಯಾನ: 2400 ಪ್ರಕರಣಗಳಿಂದ 6 ಲಕ್ಷ ಪಾವತಿ

ದಾವಣಗೆರೆ: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.೫೦% ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿಸುವ ಆದೇಶದ ಅವಕಾಶವನ್ನು ದಾವಣಗೆರೆಯ ಜನತೆ ಸದುಪಯೋಗ ಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ತಮ್ಮ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತವನ್ನು ಠಾಣೆಗಳಿಗೆ ಬಂದು ಹಾಗೂ ಆನ್‌ಲೈನ್ ಪೇಮೆಂಟ್ ಮೂಲಕ ಪಾವತಿಸುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಇಂದಿಗೆ ಒಟ್ಟು ಸುಮಾರು 2400 ಸಂಚಾರಿ ಇ-ಚಲನ್ ಪ್ರಕರಣಗಳಿಗೆ ಸಂಬಧಿಸಿದಂತೆ ಸುಮಾರು ಒಟ್ಟು 06 ಲಕ್ಷಕ್ಕೂ ಹೆಚ್ಚು ದಂಡವನ್ನು ಸಾರ್ವಜನಿಕರು ಪಾವತಿಸಿದ್ದಾರೆ.
ಸಾರ್ವಜನಿಕರು ಸದರಿ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.5೦% ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿಸುವ ಆದೇಶದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ವಾಹನಗಳ ಮೇಲೆ ಇರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತವನ್ನು ಹತ್ತಿರದ ದಾವಣಗೆರೆ ನಗರದ ಉತ್ತರ / ದಕ್ಷಿಣ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಮತ್ತು ನಗರದಲ್ಲಿ ವಿವಿಧ ಕಡೆ ಸ್ಥಾಪಿಸಲಾಗಿರುವ ಸಂಚಾರಿ ಇ-ಚಲನ್ ಪಾವತಿ ಸ್ಥಳಗಳಲ್ಲಿ / ಕರ್ನಾಟಕ ಒನ್ ಜಾಲತಾಣ / ದಾವಣಗೆರೆ ಒನ್ ಮೂಲಕ ಹಾಗೂ ಜಗಳೂರು, ಚನ್ನಗಿರಿ, ಹರಿಹರ, ಹೊನ್ನಾಳಿ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪಾವತಿಸುವ ಮೂಲಕ ಇದರ ಸದುಪೊಯೋಗ ಪಡೆದುಕೊಳ್ಳಲು ಈ ಮೂಲಕ ಕೋರಲಾಗಿದೆ.
ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ತಮ್ಮ ವಾಹನಗಳ ಮೇಲೆ ಸಂಚಾರಿ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಿಕೊಳ್ಳಲು “ಸಂಚಾರಿ ಇ-ಚಲನ್ ಪಾವತಿ ಸ್ಥಳಗಳಲ್ಲಿ ಹಾಗೂ ಕರ್ನಾಟಕ ಒನ್ ಜಾಲತಾಣಕ್ಕೆ” ಭೇಟಿ ನೀಡಿ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಲಾಗಿದೆ.
ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇ.50% ರಿಯಾಯಿತಿಯಲ್ಲಿ ದಂಡದ ಮೊತ್ತವನ್ನು ಪಾವತಿಸುವ ಆದೇಶದ ಬಗ್ಗೆ ದಾವಣಗೆರೆ ಜಿಲ್ಲೆಯ ಸಂಚಾರಿ ಪೊಲೀಸರು ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.