ಉಗ್ರರೊಂದಿಗೆ ನಂಟಿನ ಶಂಕೆ; ರಾಜ್ಯ ಪೊಲೀಸರ ಕಾರ್ಯಾಚರಣೆ; ಒಬ್ಬನ ಸೆರೆ

ರಾಜ್ಯ ಪೊಲೀಸರ ಕಾರ್ಯಾಚರಣೆ
ಬೆಂಗಳೂರು: ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ಖಚಿತ ಮಾಹಿತಿ ಮೇರೆಗೆ ರಾಜ್ಯ ಪೊಲೀಸರು ಒಬ್ಬ ವ್ಯಕ್ತಿಯನ್ನು ಇಂದು ಮುಂಜಾನೆ ವಶಕ್ಕೆ ಪಡೆದಿದ್ದಾರೆ. ರಾಜ್ಯ ಪೊಲೀಸರು ಕೇಂದ್ರದ ಬೇಹುಗಾರಿಕೆ ಸಂಸ್ಥೆಯ ಅಧಿಕಾರಿಗಳ ಸಹಯೋಗದಿಂದ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಆಪಾದಿತ, ಆರೀಫ್ ಎನ್ನುವಾತ ವಿದೇಶ ಪ್ರಯಾಣಕ್ಕೆ ತಯಾರಿ ನಡೆಸಿದ್ದ ಎಂದೂ ಹೇಳಲಾಗಿದ್ದು, ಅಷ್ಟರಲ್ಲಿಯೇ, ಪೊಲೀಸರು, ವಶಕ್ಕೆ ಪಡೆದಿದ್ದಾರೆ ಎಂದವರು ಮಾಹಿತಿ ಹಂಚಿಕೊಂಡಿದ್ದಾರೆ.
ದೇಶದಲ್ಲಿ ಕೋಮು ಭಾವನೆ ಕೆರಳಿಸಿ ಅಸ್ಥಿರತೆ ಉಂಟು ಮಾಡುತ್ತಿರುವ ಸಂಘಟನೆಗಳೂ ಹಾಗೂ ಅವುಗಳ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಗ್ಗೆ, ಸದಾ ಕಣ್ಗಾವಲು ಇರಿಸಿದ್ದು, ಭಾರತವನ್ನು ದುರ್ಬಲ ಗೊಳಿಸುವ ಎಲ್ಲಾ ಪ್ರಯತ್ನಗಳನ್ನು, ಹತ್ತಿಕ್ಕಲಾಗುವುದು ಎಂದವರು ತಿಳಿಸಿದ್ದಾರೆ.