ಗಡಿ ವ್ಯಾಜ್ಯ ಇತ್ಯರ್ಥಕ್ಕೆ ಸಮೀಕ್ಷೆ ನಡೆಸಲು ತಹಸೀಲ್ದಾರ್‌ಗೆ ಇದೆ ಅಧಿಕಾರ, ಹೈಕೋರ್ಟ್ನಿಂದ ಮಹತ್ವದ ಆದೇಶ

ಬೆಂಗಳೂರು : ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ವೇ ನಡೆಸುವ ಮತ್ತು ಗಡಿಗಳನ್ನು ಗುರುತಿಸುವ ಅಧಿಕಾರ ತಹಸೀಲ್ದಾರ್‌ಗೆ ಇಲ್ಲ ಎಂಬ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿವೇಶನ ಅಥವಾ ಜಾಗದ ಸರ್ವೆ ನಂಬರ್ ಅಥವಾ ಜಾಗದ ಒಡೆತನದ ವ್ಯಾಜ್ಯಗಳು ಏರ್ಪಟ್ಟ ಸಂದರ್ಭದಲ್ಲಿ ಭೂಮಿಯನ್ನು ಸರ್ವೆ ಮಾಡುವ ಮತ್ತು ಗಡಿಗಳನ್ನು ನಿಗದಿಪಡಿಸುವ ಅಧಿಕಾರ ತಹಶೀಲ್ದಾರ್‌ಗಳಿಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಹೈಕೋರ್ಟ್ನ ವಿಭಾಗೀಯಪೀಠ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ವೇ ನಡೆಸುವ ಮತ್ತು ಗಡಿಗಳನ್ನು ಗುರುತಿಸುವ ಅಧಿಕಾರ ತಹಸೀಲ್ದಾರ್‌ಗೆ ಇಲ್ಲ ಎಂಬ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ.

ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವಾದ ಕುರಿತು ಹೆವ್ಲೆಟ್ ಪ್ಯಾಕರ್ಡ್ (ಇಂಡಿಯಾ) ಸಾಫ್ಟೆರ್   ಆಪರೇಷನ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾ.ಅಲೋಕ್ ಆರಾಧೆ ಮತ್ತು ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಮೇಲ್ಮನವಿಯನ್ನು ಮಾನ್ಯ ಮಾಡಿರುವ ವಿಭಾಗೀಯಪೀಠ, ಜಾಗ ಅಥವಾ ಭೂಮಿ ಮಹಾನಗರ ವ್ಯಾಪ್ತಿಗೆ ಒಳಪಟ್ಟರೆ ತಹಶೀಲ್ದಾರ್ ಸರ್ವೆ ಮತ್ತು ಗಡಿಗಳನ್ನು ನಿಗದಿಪಡಿಸುವ ಅಧಿಕಾರ ಇರುವುದಿಲ್ಲ ಎಂದು ಏಕಸದಸ್ಯಪೀಠ ನೀಡಿದ್ದ ತೀರ್ಪನ್ನು ಅನೂರ್ಜಿತಗೊಳಿಸಿದೆ.

ಕರ್ನಾಟಕ ಭೂಕಂದಾಯ ಕಾಯಿದೆ 1964ರ ಸೆಕ್ಷನ್ 140(2)ರ ಪ್ರಕಾರ ಸರ್ವೆ ನಂಬರ್‌ನ ಗಡಿ ಅಥವಾ ಸರ್ವೆ ನಂಬರ್‌ನ ಉಪವಿಭಾಗ ಅಥವಾ ಭೂ ಹಿಡುವಳಿ ಸಂಬAಧಿಸಿದAತೆ ಯಾವುದೇ ವಿವಾದ ಉಂಟಾದರೆ ಸ್ಥಳೀಯ ತಹಶೀಲ್ದಾರ್ ಭೂ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವ ವಿವಾದವನ್ನು ನಿರ್ಧರಿಸುತ್ತಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಕಾಯಿದೆಯ ಅನುಸಾರ ತಹಸೀಲ್ದಾರ್‌ಗೆ ಲಭ್ಯವಿರುವ ಅಧಿಕಾರವು ಪುರಸಭೆಯ ಮಿತಿಯೊಳಗೆ ಅಥವಾ ಹೊರಗೆ ಇದೆಯೇ ಎಂಬ ಅಂಶ ಪರಿಗಣಿಸದೆ ಸರ್ವೆ ನಂಬರ್ ಅಥವಾ ಭೂ ಒಡೆತನ ಸಂಬAಧ ಚಲಾಯಿಸಬಹುದೆಂದು ನ್ಯಾಯಪೀಠ ಹೇಳಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬೆಂಗಳೂರು ಪೂರ್ವ ತಾಲೂಕಿನಲ್ಲಿರುವ ಭೂ ವ್ಯಾಜ್ಯದ ಸಂಬಧ ಬೆಂಗಳೂರಿನ ಸುನಿಲ್ ಚಾಜೇದ್ ಮತ್ತು ಹೆವ್ಲೆಟ್ ಪ್ಯಾಕರ್ಡ್ (ಇಂಡಿಯಾ) ಸಾಫ್ಟ್ವೇರ್ ಆಪರೇಷನ್ ಪ್ರೆವೇಟ್ ಲಿಮಿಟೆಡ್ ನಡುವಿನ ನಿವೇಶನದ ಗಡಿ ವಿವಾದ ಸಮಸ್ಯೆ ಉಂಟಾಗಿತ್ತು. ಸುನೀಲ್ ಅವರ ಮನವಿ ಮೇರೆಗೆ ತಹಶೀಲ್ದಾರ್ ಜಾಗದ ಸರ್ವೇ ನಡೆಸಿ ಗಡಿಗಳನ್ನು ನಿಗದಿಪಡಿಸಲು ಮುಂದಾಗಿದ್ದರು ಮತ್ತು ಈ ಕ್ರಮವನ್ನು ಕಂಪನಿಯು ಪ್ರಶ್ನಿಸಿತ್ತು ಈ ಹಿಂದೆ ನ್ಯಾಯಾಲಯ ನೀಡಿದ ನಿರ್ದೇಶನದ ಮೇರೆಗೆ ತಹಶೀಲ್ದಾರ್ ಅವರು ಗಡಿ ವಿವಾದದ ಸಂದರ್ಭದಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿಯನ್ನು ಸರ್ವೆ ಮಾಡಲು ಮತ್ತು ಗಡಿಗಳನ್ನು ನಿಗದಿಪಡಿಸಲು ತಮ್ಮ ಅಧಿಕಾರವಿದೆ ಎಂದು ಪ್ರತಿಪಾದಿಸಿದ್ದರು. ಇದನ್ನು ಅನುಸರಿಸಿ ಕಂಪನಿಯು, ಜಮೀನು ಸರ್ವೆ ಮಾಡುವ ಅಧಿಕಾರವನ್ನು ಪ್ರಶ್ನಿಸಿ, ತಹಶೀಲ್ದಾರ್‌ಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ ಎಂದು ವಾದಿಸಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!