ಟ್ಯಾಂಕರ್ ಲಾರಿ ಪಲ್ಟಿ , ಮಣ್ಣುಪಾಲಾದ ಸ್ಪರಿಟ್

ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿದ ಸ್ಪಿರಿಟ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಲಾರಿ ಪಲ್ಟಿಯಾದ ಘಟನೆ ದಾವಣಗೆರೆಯ  ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ನಡೆದಿದದೆ.

ಜಿಲ್ಲಾ ಪಂಚಾಯತ್ ಮುಂಭಾಗದ   ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.

ಟ್ಯಾಂಕರ್ ನಲ್ಲಿದ್ದ ಸಾವಿರಾರು ಲೀಟರ್ ಸ್ಪಿರಿಟ್ ಮಣ್ಣುಪಾಲಾಗಿದೆ. ವಿದ್ಯಾನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಸ್ಥಳಕ್ಕೆ ಸಂಚಾರಿ ಪೋಲೀಸರು ಭೇಟಿ ನೀಡಿ ಪರಿಶಿಲಿಸಿದರು.

Leave a Reply

Your email address will not be published. Required fields are marked *

error: Content is protected !!