ಟ್ಯಾಕ್ಸ್ ಕನ್ಸಲ್ಟಂಟ್ ವ್ಯಕ್ತಿಗೆ ಬರೋಬ್ಬರಿ 10.42 ಲಕ್ಷ ಪಂಗನಾಮ ಹಾಕಿದ ಸೈಬರ್ ಕಳ್ಳರು
ದಾವಣಗೆರೆ: ಶೇರ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡುವಂತೆ ನಂಬಿಸಿ ವ್ಯಕ್ತಿಯೋರ್ವರಿಗೆ ಬರೋಬ್ಬರಿ 10.42 ಲಕ್ಷ ರೂ., ಪಂಗನಾಮ ಎಳೆದಿರುವ ಘಟನೆ ನಗರದಲ್ಲಿ ನಡೆದಿದ್ದು, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯಾಕ್ಸ್ ಕನ್ಸಲ್ ಟೆಂಟ್ ಆಗಿರುವ ಬಸವರಾಜ ಮೋಸ ಹೋದವರು. ಇವರಿಗೆ ಕರೆ ಮಾಡಿದ ವ್ಯಕ್ತಿ ಶೇರ್ ಕಂಪನಿಯ ಹೆಸರೇಳಿಕೊಂಡು ಬೇರೆ-ಬೇರೆ ಖಾತೆಗಳಿಗೆ 10,42,840 ರೂ., ಹಣ ವರ್ಗಾಯಿಸಿಕೊಂಡಿದ್ದಾನೆ. ಬಸವರಾಜ್ ಅವರಿಗೆ ನಂತರ ತಾವು ಮೋಸ ಹೋಗಿರುವ ಬಗ್ಗೆ ಅನುಮಾನ ಮೂಡಿದ್ದು, ಹಣ ಹಿಂದಿರುಗಿಸುವಂತೆ ಕೋರಿದ್ದಾರೆ. ಆದರೆ, ಆ ವ್ಯಕ್ತಿ ಇತರೆ ಕಾರಣಗಳನ್ನು ಹೇಳಿ ಹಣ ಹಿಂತಿರುಗಿಸಲು ನಿರಾಕರಿಸಿದ್ದಾನೆ.
ಇದರಿಂದ ಅನುಮಾನ ಮತ್ತಷ್ಟು ಬಲವಾಗಿದ್ದು, ಬಸವರಾಜ್ ಅವರು ಆನ್ ಲೈನ್ ವಂಚಕನನ್ನು ಬಂಧಿಸಿ, ತಮ್ಮ ಹಣವನ್ನು ವಾಪಸ್ಸು ಕೊಡಿಸುವಂತೆ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.