ಲೋಕಲ್ ಸುದ್ದಿ

ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ ಟೀಕಿಸಿದ ಶಿಕ್ಷಕ ಸಸ್ಪೆಂಡ್

ಫೇಸ್‌ಬುಕ್‌ನಲ್ಲಿ ಸಿದ್ದರಾಮಯ್ಯ ಟೀಕಿಸಿದ ಶಿಕ್ಷಕ ಸಸ್ಪೆಂಡ್

ಹೊಸದುರ್ಗ: ಫೇಸ್‌ಬುಕ್‌ ಖಾತೆಯಲ್ಲಿ ಸರ್ಕಾರ ಟೀಕಿಸುವ ಬರಹ ಪೋಸ್ಟ್‌ ಮಾಡಿದ ಆರೋಪದ ಮೇಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.

ತಾಲ್ಲೂಕಿನ ಕಾನುಬೇನಹಳ್ಳಿ ಶಿಕ್ಷಕ ಶಾಂತಮೂರ್ತಿ ಎಂ.ಜಿ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್‌. ಜಯಪ್ಪ ಅಮಾನತು ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಶಾಂತಮೂರ್ತಿ ಅವರು, ‘ಎಸ್.ಎಂ. ಕೃಷ್ಣ ಅವಧಿಯಲ್ಲಿ 3,590 ಕೋಟಿ, ಧರ್ಮಸಿಂಗ್ 15,635 ಕೋಟಿ, ಎಚ್.ಡಿ. ಕುಮಾರಸ್ವಾಮಿ 3,545 ಕೋಟಿ, ಬಿ.ಎಸ್‌. ಯಡಿಯೂರಪ್ಪ 25,653 ಕೋಟಿ, ಸದಾನಂದಗೌಡ 9,464 ಕೋಟಿ, ಜಗದೀಶ ಶೆಟ್ಟರ್ 13,464 ಕೋಟಿ, ಸಿದ್ದರಾಮಯ್ಯ 2,42,000 ಕೋಟಿ ಸಾಲ ಮಾಡಿದರು.

ಎಸ್.ಎಂ. ಕೃಷ್ಣ ಅವಧಿಯಿಂದ ಶೆಟ್ಟರ್‌ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ, ಸಿದ್ದರಾಮಯ್ಯ ಅವರು ಮಾಡಿದ ‌ಸಾಲ 2,42,000 ಕೋಟಿ. ಹೀಗಿರುವಾಗ ಬಿಟ್ಟಿ ಭಾಗ್ಯ ಕೊಡದೆ ಇನ್ನೇನು ಎಂದು ಬರಹದಲ್ಲಿ ಟೀಕಿಸಿದ್ದರು. ಈ ಮಾಹಿತಿಯನ್ನು ವಾಟ್ಸ್‌ಆಪ್ ಗ್ರೂಪ್‌ಗಳಿಗೂ ಶೇರ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಮೂರ್ತಿ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top