Thahasildar Dance: ನಿರಾಶ್ರಿತರ ಕೇಂದ್ರದಲ್ಲಿ ತಹಸೀಲ್ದಾರ್ ಭರ್ಜರಿ ಡ್ಯಾನ್ಸ್: ಕುಲದಲ್ಲಿ ಕಿಳ್ಯಾವುದೋ ಹುಚ್ಚಪ್ಪ ಹಾಡಿಗೆ ಯಾಕೆ ನೃತ್ಯ ಗೊತ್ತಾ.?
ದಾವಣಗೆರೆ: ಅಧಿಕಾರಿಗಳು ಅಂದರೆ ಸರ್ಕಾರಿ ಕೆಲಸಕ್ಕೆ ಸೀಮಿತ ಮಾತ್ರ ಅಂತಾರೆ ಅಥವಾ ಮನೆ ಬಿಟ್ಟರೆ ಕಚೇರಿ – ಕಚೇರಿ ಬಿಟ್ಟರೆ ಮನೆ, ಎಂಬಂತೆ ತಮ್ಮ ದೈನಂದಿನ ಕಾರ್ಯಕ್ಕೆ ಸೀಮಿತ ಮಾಡಿ ಕೊಂಡಿರುತ್ತಾರೆ. ಅದರೆ ಇಲ್ಲೊಬ್ಬ ತಹಸೀಲ್ದಾರ್ ನಾನು ಅಧಿಕಾರಿ ಎಂಬ ಅಹಂಕಾರ ಬಿಟ್ಟು ನಿರಾಶ್ರಿತರರೊಂದಿಗೆ ಸಖತ್ತಾಗಿ ಕುಣಿದು ಕುಪ್ಪಳಿಸಿ ನಿರಾಶ್ರಿತರಿಗೆ ಮನರಂಜನೆ ನೀಡಿದ್ದಾರೆ.
ದಾವಣಗೆರೆ ತಹಶಿಲ್ದಾರ್ ಗಿರೀಶ್
ಕುಲದಲ್ಲಿ ಕೀಳ್ಯಾವೂದೋ ಹುಚ್ಚಪ್ಪ ಹಾಡಿಗೆ ಸಖತ್ ಸ್ಟೆಪ್ ಹಾಕಿ ನಿರಾಶ್ರಿತರನ್ನು ರಂಜಿಸಿದರು. ದಾವಣಗೆರೆ ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರದಲ್ಲಿ ಭಾನುವಾರ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಕುಟುಂಬ ಬಿಟ್ಟು ಬಂದಿದ್ದ ನಿರಾಶ್ರಿತರಿಗೆ ಗಣೇಶ ಹಬ್ಬವನ್ನು ಆಚರಣೆ ಮಾಡಿಲ್ಲ ಎಂಬ ಕೊರಗನ್ನು ತಹಸೀಲ್ದಾರ್ ಹಾಗು ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕರಾದ ನಳಿನಿ, ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಅಚರಣೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಾಶ್ರಿತರಿಗೆ ರಂಜಿಸಿದ್ರು.
ಇನ್ನು ಗಣೇಶನನ್ನು ಮೂರು ದಿನಗಳ ಬಳಿಕ ವಿಸರ್ಜನೆ ಮಾಡಲಾಯಿತು. ವಿಸರ್ಜನೆ ಕಾರ್ಯಕ್ರಮಕ್ಕೆ ದಾವಣಗೆರೆ ತಾಲ್ಲೂಕಿನ ತಹಸೀಲ್ದಾರ್ ಗಿರೀಶ್ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ನಿರಾಶ್ರಿತರೊಂದಿಗೆ ಕುಲದಲ್ಲಿ ಕೀಳ್ಯಾವೂದೋ ಹುಚ್ಚಪ್ಪ, ಹಾಗು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಚಲನಚಿತ್ರದ ಹಾಡುಗಳಿಗೆ ನಿರಾಶ್ರಿತರೊಂದಿಗೆ ಸಖತ್ತಾಗಿ ನೃತ್ಯ ಮಾಡಿ ಮನರಂಜನೆ ನೀಡಿದ್ರು. ಒಟ್ಟಾರೆ ಕೇವಲ ಟಿವಿಯಲ್ಲಿ ಹಾಡು ನೃತ್ಯವನ್ನು ನೋಡುತ್ತಿದ್ದ ನಿರಾಶ್ರಿತರಿಗೆ ತಹಸೀಲ್ದಾರ್ ಜೊತೆ ನೃತ್ಯ ಮಾಡಿದ್ದ ಸಂತೋಷ ಮತ್ಯೆಂದು ಸಿಗೊದಿಲ್ಲ ಎಂದುಕೊಂಡರು.