ಯುದ್ಧದ ಎರಡನೇ ಅಧ್ಯಾಯ ಆರಂಭ ! ರಷ್ಯಾ
ಮಾಸ್ಕೋ (ರಷ್ಯಾ) : ಉಕ್ರೇನ್ ಮೇಲಿನ ದಾಳಿಯ ಮೊದಲನೇ ಅಧ್ಯಾಯ ಯಶಸ್ವಿಯಾಗಿ ಪೂರ್ಣಗೊಡಿದೆ. ಈಗ ನಾವು ಎರಡನೆಯ ಅಧ್ಯಾಯದ ಕಡೆಗೆ ಹೋಗುತ್ತಿದ್ದೇವೆ ಎಂದು ರಷ್ಯಾದ ಸೈನ್ಯಾಧಿಕಾರಿ ಸರ್ಗೆಯಿ ರುಡಸ್ಕಾಯ ಹೇಳಿದ್ದಾರೆ. ಈ ಸಮಯದಲ್ಲಿ ಉಕ್ರೇನ್‌ನಿನ ಸೈನ್ಯ ಶಕ್ತಿ ದೊಡ್ಡ ಪ್ರಮಾಣದಲ್ಲಿ ನಾಶವಾಗಿದೆ. ಅದರಿಂದ ನಾವು ಈಗ ನಮ್ಮ ಮುಖ್ಯ ಗುರಿಯ ಕಡೆಗೆ (ಡೊಬ್ಬಾಸ್ ನಗರದಲ್ಲಿ ಪೂರ್ಣ ನಿಯಂತ್ರಣ ಪಡೆಯುವ ಬಗ್ಗೆ) ಧಾವಿಸುತ್ತಿದ್ದೇವೆ. ನಾವು ಉಕ್ರೇನಿನ ತುಂಡು ತುಂಡು ಮಾಡುವವರಿದ್ದೇವೆ ಎಂದು ಜನತೆಗೆ ಅನಿಸಿರಬಹುದು. ಆದರೆ ನಮ್ಮ ಉದ್ದೇಶ ಉಕ್ರೇನಿನ ಮೂಲಭೂತ ಸೌಲಭ್ಯಗಳನ್ನು ನಾಶ ಮಾಡುವುದು ಆಗಿದೆ. ಆದಕಾರಣ ನಾವು ಡೋನಾಬಾಸನಲ್ಲಿ ಹೆಚ್ಚು ಗಟ್ಟಿತನದಿಂದ ಹೋರಾಡಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ರಷ್ಯಾದ 1 ಸಾವಿರದ 351 ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನೊಂದು ಕಡೆಗೆ ನಾಟೋ ಮತ್ತು ಉಕ್ರೇನ್ ದಾವೆ ಮಾಡಿದೆ, ರಷ್ಯಾದಿಂದ 15 ಸಾವಿರಕ್ಕಿಂತ ಹೆಚ್ಚಿನ ಸೈನಿಕರು ಹತರಾಗಿದ್ದಾರೆ ಎಂದಿದ್ದಾರೆ.