ಗ್ರಾಮ ಪಂಚಾಯಿತಿ ತೆರವಾದ ಸ್ಥಾನಗಳಿಗೆ ಉಪಚುನಾವಣಾ ವೇಳಾಪಟ್ಟಿ ಪ್ರಕಟ

The by-election schedule for the vacant seats of the Gram Panchayat has been announced

ಗ್ರಾಮ ಪಂಚಾಯಿತಿ ತೆರ

ದಾವಣಗೆರೆ : ದಾವಣಗೆರೆ ಜಿಲ್ಲೆಯಲ್ಲಿ   ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿ  ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಅವರು ಆದೇಶಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ಫೆ.14 ಕೊನೆಯ ದಿನ. ನಾಮಪತ್ರಗಳ ಪರಿಶೀಲಿಸಲು ಫೆ.15 ಕೊನೆಯ ದಿನ. ನಾಮಪತ್ರ ವಾಪಸ್ ಪಡೆಯಲು ಫೆ.17 ಕೊನೆಯದಿನ. ಮತದಾನ ಅವಶ್ಯವಿದ್ದಲ್ಲಿ  ಫೆ.25 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು ಫೆ.28 ರ ವರೆಗೆ ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಉಪ ಚುನಾವಣೆ ನಡೆಯಲಿರುವ ಸ್ಥಾನಗಳ ವಿವರ; ನ್ಯಾಮತಿ ತಾಲ್ಲೂಕಿನ ಗುಡ್ಡೇಹಳ್ಳಿ ಗ್ರಾ.ಪಂ ಜೀನಹಳ್ಳಿ 1, ಜೀನಹಳ್ಳಿ 2,  ಜಗಳೂರು ತಾಲ್ಲೂಕು ಅಸಗೋಡು ಗ್ರಾ.ಪಂ. ತುಪ್ಪದಹಳ್ಳಿ 1, ದೋಣೆಹಳ್ಳಿ ಗ್ರಾ.ಪಂ. ಸಿದ್ದಮ್ಮನಹಳ್ಳಿ 1, ಬಿಸ್ತುವಳ್ಳಿಯ ವ್ಯಾಸಗೊಂಡನಹಳ್ಳಿ, ಕಸ್ತೂರಿಪುರ ತಲಾ 1 ಸ್ಥಾನ.  ದಾವಣಗೆರೆ ತಾಲ್ಲೂಕಿನ ಅತ್ತಿಗೆರೆಗೆ ಕಬ್ಬೂರು, ಮತ್ತಿಯ  ಗೋಣಿವಾಡ ಕ್ಯಾಂಪ್, ಕುಕ್ಕುವಾಡ-2 ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.  ಹರಿಹರ ತಾಲ್ಲೂಕಿನ ಗ್ರಾಮ ಎಳೆಹೊಳೆ ಗ್ರಾ.ಪಂ.ನ ಮಳಲಹಳ್ಳಿ ಕ್ಷೇತ್ರ, ಚನ್ನಗಿರಿ ತಾಲ್ಲೂಕಿನ ನವಿಲೇಹಾಳು ಪಂಚಾಯಿತಿಯ ದೊಡ್ಡಘಟ್ಟ, ಚನ್ನೇಶಪುರ ಪಂಚಾಯಿತಿಯ 1-ಚನ್ನೇಶಪುರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!