ಕಾಡು ಪ್ರಾಣಿಗಳನ್ನು ಸಾಕಿದ್ದ ಪ್ರಕರಣ, ಎಸ್.ಎಸ್. ಮಲ್ಲಿಕಾರ್ಜುನ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

ದಾವಣಗೆರೆ: ತಮ್ಮ ಒಡೆತನದ ರೈಸ್ ಮಿಲ್‌ನಲ್ಲಿ ಕಾಡು ಪ್ರಾಣಿಗಳು ಸಾಕಿದ್ದ ಪ್ರಕರಣಕ್ಕೆ ಸಂಬ0ಧಿಸಿದ0ತೆ ಕಾಂಗ್ರೆಸ್ ಮುಖಂಡ ಎಸ್.ಎಸ್.ಮಲ್ಲಿಕಾರ್ಜುನ ಸೇರಿದಂತೆ ಒಟ್ಟು ಮೂವರಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ದ ನಿರೀಕ್ಷಣಾ ಜಾಮೀನು ನೀಡಿದೆ.
ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪರವಾಗಿ ಪ್ರಕಾಶ್ ಪಾಟೇಲ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅಂತೆಯೇ ಸಂಪನ್ನ ಮುತಾಲಿಕ್ ಹಾಗೂ ಕರಿಬಸಯ್ಯ ಅವರ ಪರವಾಗಿ ಎಚ್.ವಿ.ರಾಮದಾಸ್ ಅವರು ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ನೀಡಲು ಅರ್ಜಿ ಸಲ್ಲಿಸಿದ್ದರು. ಈ ಇಬ್ಬರು ವಕೀಲರು ಎಸ್.ಎಸ್.ಮಲ್ಲಿಕಾರ್ಜುನ್ , ಸಂಪಣ್ಣ ಮುತಾಲಿಕ್ ಹಾಗೂ ಕರಿಬಸಯ್ಯ ಅವರ ಪರವಾಗಿ ವಾದ ಮಂಡಿಸಿದ್ದರು.
ಕಳೆದ 30ರಂದು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆದಿತ್ತು. ಪ್ರಕರಣದ ಆದೇಶವನ್ನು ಜನವರಿ 5ಕ್ಕೆ ದಿನಾಂಕ ನಿಗದಿ ಮಾಡಿ ,ವಿಚಾರಣೆಯನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಲಯವು ಮುಂದೂಡಿತ್ತು. ಅದರಂತೆ ಗುರುವಾರವಾದ ಇಂದು ನ್ಯಾಯಾಲಯ ಪ್ರಕರಣದ ಮೂವರು ಅರೋಪಿಗಳಾದ ಎಸ್.ಎಸ್. ಮಲ್ಲಿಕಾರ್ಜುನ , ಸಂಪನ್ನ ಮುತಾಲಿಕ್ ಹಾಗೂ ಕರಿಬಸಯ್ಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.
ದಾವಣಗೆರೆ ನಗರದ ಆನೆಕೊಂಡದ ಶ್ರೀ ಕಲ್ಲೇಶ್ವರ ರೈಸ್ ಮಿಲ್‌ನ ಜಾಗದಲ್ಲಿ ಕೃಷ್ಣಮೃಗ , ಜಿಂಕೆ , ಕಾಡು ಹಂದಿ, ನರಿ, ಮುಂಗುಸಿಯ0ತಹ ಕಾಡು ಪ್ರಾಣಿಗಳನ್ನು ಸಾಕಿದ್ದ ಪ್ರಕರಣಕ್ಕೆ ಸಂಬoಧಿಸಿದ0ತೆ ನಾಲ್ವರ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು , ಈ ಪೈಕಿ ಮಾಜಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ನಾಲ್ಕನೇ ಆರೋಪಿಯಾಗಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ತಮ್ಮ ಪರ ವಕೀಲ ಪ್ರಕಾಶ ಪಾಟೀಲ್‌ರ ಮುಖಾಂತರ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಮೀನು ಅರ್ಜಿ ಸೋಮವಾರ ವಿಚಾರಣೆ ನಡೆದಿದ್ದು , ಒಂದೇ ಪ್ರಕರಣಕ್ಕೆ ಎರಡು ಕಡೆ ಕೇಸ್ ದಾಖಲಿಸುವಲ್ಲಿ ತಾಂತ್ರಿಕ ದೋಷವಾಗಿದೆ.
ಬೆಂಗಳೂರಿನ ಸಿಸಿಬಿ ಪೋಲೀಸರು ಹಾಗೂ ದಾವಣಗೆರೆ ಅರಣ್ಯ ಇಲಾಖೆಯಿಂದ ತಲಾ ಒಂದೊ0ದು ಕೇಸ್ ದಾಖಲಾಗಿದೆ. ಒಂದೇ ಪ್ರಕರಣಕ್ಕೆ ಸಂಬ0ಧಿಸಿದ0ತೆ ಎರಡು ಕಡೆ ಕೇಸ್ ದಾಖಲಿಸಿರುವುದು ತಾಂತ್ರಿಕ ದೋಷವಾಗಿದೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ಪರ ವಕೀಲ ಪ್ರಕಾಶ ಪಾಟೀಲ ವಾದ ಮಂಡಿಸಿದರು.
ಅಲ್ಲದೇ ತಮ್ಮ ಕಕ್ಷಿದಾರು ಪ್ರತಿಷ್ಟಿತ ವ್ಯಕ್ತಿಗಳಾಗಿದ್ದು ,ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿದ್ದು , ಜಾಮೀನು ನೀಡುವಂತೆ ಎಸ್ಸೆಸ್ಸೆಂ ಪರ ವಕೀಲ ಪ್ರಕಾಶ ಪಾಟೀಲ್ ನ್ಯಾಯಾಲಯದಲ್ಲಿ ವಾದ ಮಂಡಿಸಿ, ನ್ಯಾಯಾಧೀಶರಿಗೆ ಮನವಿ ಮಾಡಿದರು.ಇದಕ್ಕೆ ಸರ್ಕಾರಿ ಅಭಿಯೋಜಕರು ಎಸ್ಸೆಸ್ ಮಲ್ಲಿಕಾರ್ಜುನ ಜಾಮೀನು ಕೋರಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ವ್ಯಕ್ತಪಡಿಸಿ , ವನ್ಯಜೀವಿಗಳ ಪ್ರಕರಣವಾದ ಹಿನ್ನೆಲೆಯಲ್ಲಿ ಜಾಮೀನು ನೀಡದಂತೆ ನ್ಯಾಯಾಲಯದಲ್ಲಿ ತಮ್ಮ ವಾದವನ್ನು ಮಂಡಿಸಿದರು. ಉಭಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಆದೇಶಕ್ಕಾಗಿ ಜ.5ಕ್ಕೆ ದಿನಾಂಕ ನಿಗದಿ ಮಾಡಿ , ವಿಚಾರಣೆಯನ್ನು ಮುಂದೂಡಿತ್ತು.

 

Leave a Reply

Your email address will not be published. Required fields are marked *

error: Content is protected !!