ವಿಜ್ಞಾನದ ಸಂಶೋಧನೆಗಳು ಮನುಕುಲಕ್ಕೆ ಒಳಿತು ಮಾಡಬೇಕು – ಡಾ|| ಎಸ್.ಶಿಶುಪಾಲ

IMG-20220301-WA0013

ದಾವಣಗೆರೆ: “ಯಾವುದೇ ವೈಜ್ಞಾನಿಕ ಸಂಶೋಧನೆಗಳು ಮನುಕುಲಕ್ಕೆ ಒಳಿತು ಮಾಡಬೇಕು. ಪ್ರಶಸ್ತಿ, ಪುರಸ್ಕಾರ, ಇಲ್ಲಿ ಮುಖ್ಯವಲ್ಲ.” ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ|| ಎಸ್.ಶಿಶುಪಾಲ ಅಭಿಪ್ರಾಯಪಟ್ಟರು.

ದಾವಣಗೆರೆಯ ಶಾಮನೂರು-ಬನಶಂಕರಿ ಬಡಾವಣೆಯಲ್ಲಿರುವ ಮಯೂರ ಗ್ಲೋಬಲ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೂಯಿ ಪಾಶ್ಚರ್, ಗ್ರೆಗೋರ್ ಮೆಂಡಲ್ ಮುಂತಾದವರು ವಿಶ್ವಕ್ಕೆ ನೆರವಾಗುವಂಥ ಸಂಶೋಧನೆಗಳನ್ನು ಮಾಡಿದರು. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ಅಂಥದೇ ಸಂಶೋಧನೆ ಮಾಡಿದವರು. ಅವರ ನೆನಪಿಗೆ ರಾಷ್ಟಿçÃಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ದಾವಣಗೆರೆಯಲ್ಲಿ 248 ರೀತಿಯ ಪಕ್ಷಿಗಳನ್ನು ಗುರುತಿಸಿದ್ದೇನೆ ಎಂದ ಶಿಶುಪಾಲ, ಕೆಲ ಬಾತು ಕೋಳಿಗಳು ಮಂಗೋಲಿಯಾದಿAದ ಹಿಮಾಲಯ ಪರ್ವತ ದಾಟಿ ದಾವಣಗೆರೆಗೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಅವುಗಳ ರಕ್ಷಣೆ ನಮ್ಮ ಹೊಣೆ ಎಂದರು.

‘ನನ್ನ ಗಿಡ ನನ್ನ ಸ್ನೇಹಿತ’ ಎಂಬ ಘೋಷಣೆ ಅಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡನೆಟ್ಟು ಬೆಳೆಸಬೇಕು. ಪ್ರಕೃತಿ-ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ನಮ್ಮ ಜೀವನದ ಪ್ರತಿ ಅಂಶದಲ್ಲೂ ವಿಜ್ಞಾನವಿದೆ. ವಿಜ್ಞಾನದ ಸದ್ಬಳಕೆ ಆದರೆ ಮಾತ್ರ ಮನುಕುಲಕ್ಕೆ ಒಳತಾಗುತ್ತದೆ. ದುರ್ಬಳಕೆ ಆದರೆ ಮನುಕುಲ ನಾಶವಾಗುತ್ತದೆ. ಈ ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ನಾವು ಅದಕ್ಕೆ  ಏನು ಕೊಟ್ಟಿದ್ದೇವೆ ? ಎಂದು ಪ್ರಶ್ನಿಸಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನಕ್ಕೆ ಸಂಬಂಧಪಟ್ಟ ಹಾಡು, ಆಟಗಳು ಪ್ರದರ್ಶನಗೊಂಡವು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀಮತಿ ದೇವಿಕಾರಾಣಿ, ಶ್ರೀಮತಿ ರೋಸಾ, ಕು.ಕಾವ್ಯ, ರೋಹಿಣಿ, ರಶ್ಮಿ ಮುಂತಾದವರು ನಡೆಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!