ರಂಗೇರುತ್ತಿರುವ ಚುನಾವಣೆ ‘ಬಿಸಿ’ಲಿನಲ್ಲಿ ಬಸವಳಿಯುತ್ತಿರುವ ಮಾಧ್ಯಮ ಮಿತ್ರರು

ರಂಗೇರುತ್ತಿರುವ ಚುನಾವಣೆ 'ಬಿಸಿ'ಲಿನಲ್ಲಿ ಬಸವಳಿಯುತ್ತಿರುವ ಮಾಧ್ಯಮ ಮಿತ್ರರು

ದಾವಣಗೆರೆ: ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಅಧಿಕಾರಿಗಳು ಅಷ್ಟೇ ಬಸವಳಿಯುತ್ತಿಲ್ಲ. ಇವರೆಲ್ಲರಿಗಿಂತ ಹೆಚ್ಚಾಗಿ ಶ್ರಮವಹಿಸುತ್ತಿರುವುದು ಮಾಧ್ಯಮದವರು.

ಬುಧವಾರ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚಿತ್ರ ನಟ ಕಿಚ್ಚ ಸುದೀಪ್ ಪ್ರಚಾರಕ್ಕೆ ಆಗಮಿಸಿದಾಗ ಮಾಧ್ಯಮದವರು ಸುದ್ದಿ ಹಾಗೂ ವೀಡಿಯೋ ಚಿತ್ರೀಕರಣಕ್ಕಾಗಿ ಶ್ರಮ ಪಟ್ಟ ಈ ಫೋಟೋ ನೋಡಿದರೆ ನಿಮಗೆ ಮಾಧ್ಯಮದವರ ಸಂಕಷ್ಟಗಳು ತಿಳಿಯಬಹುದು.

ಹೌದು, ಒಬ್ಬ ರಾಜಕೀಯ ವ್ಯಕ್ತಿ ತನ್ನ ಪಕ್ಷದ ಪರ ಪ್ರಚಾರ ಮಾಡುತ್ತಾನೆ. ಆದರೆ ಅಂತಹ ಹಲವಾರು ಪ್ರಚಾರದ ಕಾರ್ಯಗಳನ್ನು ಸುದ್ದಿಯನ್ನು, ಫೋಟೋಗಳನ್ನು, ವೀಡಿಯೋಗಳನ್ನು ನೀಡಬೇಕಾದ ಅನಿವಾರ್ಯತೆ ಮಾಧ್ಯಮದವರಿಗೆ.

 

ರಂಗೇರುತ್ತಿರುವ ಚುನಾವಣೆ
'ಬಿಸಿ'ಲಿನಲ್ಲಿ ಬಸವಳಿಯುತ್ತಿರುವ ಮಾಧ್ಯಮ ಮಿತ್ರರು

ಇನ್ನೂ ಸ್ಟಾರ್ ಪ್ರಚಾರಕರು ಬಂದರಂತೂ ಮಾಧ್ಯಮವರ ಪಾಡು ಹೇಳತೀರದು. ಅಭಿಮಾನಿಗಳೇ ತುಂಬುವ ಜಾಗದಲ್ಲಿ ಇವರಿಗೆ ನಿಲ್ಲಲೂ ಜಾಗ ಸಾಕಾಗುವುದಿಲ್ಲ. ಕಿಚ್ಚ ಸುದೀಪ್ ಆಗಮಿಸಿದಾಗ ಪುಣ್ಯಕ್ಕೆ ಎಂಬುವಂತೆ ಕಿಚ್ಚನ ಎದುರು ಚಿಕ್ಕದೊಂದು ವಾಹನದ ವ್ಯವಸ್ಥೆ ಕಲ್ಪಿಸಿದ್ದರು ಮಾಧ್ಯದವರಿಗಾಗಿ. ಆದರೆ ಕೆಲವರಷ್ಟೇ ಅದರಲ್ಲಿ ನಿಲ್ಲಲು ಸಾಧ್ಯವಾಯಿತು.

ಹೀಗಾಗಿ ಕೆಲ ನ್ಯೂಸ್ ಚಾನೆಲ್ ಕ್ಯಾಮೆರಾ ಮನ್‌ಗಳು, ವರದಿಗಾರರು ನಡೆದೇ ಸಾಗಬೇಕಾಗಿತ್ತು.

ಬಸವಳಿಸುವ ಬಿಸಿಲು, ಸುದ್ದಿಗಳನ್ನು ನೀಡಬೇಕಾದ ಒತ್ತಡ, ಇತ್ತ ತಮ್ಮ ಆರೋಗ್ಯದ ಕಡೆಯೂ ಗಮನ ಹರಿಸಬೇಕಾದ ಅನಿವಾರ್ಯತೆ, ಜೊತೆಗೆ ತಮ್ಮ ಕ್ಯಾಮೆರಾಗಳನ್ನೂ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ, ಹೀಗೆ ಅನೇಕ ಸಂಕಷ್ಟಗಳ ನಡೆವೆಯೂ ನಮ್ಮ ಮಾಧ್ಯಮ ಮಿತ್ರರು ಕಾರ್ಯನಿರ್ವಹಿಸುತ್ತಾರೆ. ಅವರ ಬಗ್ಗೆ ತುಸು ಗೌರವವಿರಲಿ ಎಂಬುದೆ ನಮ್ಮ ನಮ್ಮಗಳ ಆಶಯ.

Leave a Reply

Your email address will not be published. Required fields are marked *

error: Content is protected !!