3 ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಹಾಗೂ ಪಪ್ಪಾಯಿ ಗಿಡಗಳನ್ನು ಕಡಿದ ದುಷ್ಕರ್ಮಿಗಳು

Adike & popaye

ದಾವಣಗೆರೆ: ಯಾವುದೋ ವೈಷಮ್ಯಕ್ಕೆ ದುಷ್ಕರ್ಮಿಗಳು ಮೂರು ಎಕರೆ ಜಾಗದಲ್ಲಿ ಬೆಳೆದಿದ್ದ ಅಡಿಕೆ ಮರ, ಪಪ್ಪಾಯಿ ಗಿಡಗಳನ್ನು ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಬೋರಗೊಂಡನಹಳ್ಳಿಯಲ್ಲಿ ನಡೆದಿದೆ.

ಎಸ್.ಎನ್. ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಕೃತ್ಯ ಎಸಗಲಾಗಿದ್ದು, ಸುಮಾರು 10 ಲಕ್ಷ ರು., ನಷ್ಟ ಸಂಭವಿಸಿರುವುದಾಗಿ ತಿಪ್ಪೇಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ‌.

Leave a Reply

Your email address will not be published. Required fields are marked *

error: Content is protected !!