ರಾಷ್ಟ್ರೀಯ ಸುದ್ದಿ

ಈ ಕುರಿಯ ಬೆಲೆ 1 ಕೋಟಿ ರೂ.! ಅದರೂ ಮಾರಾಟ ಮಾಡಲಿಲ್ಲ ಮಾಲೀಕ

ಕುರಿಯ ಬೆಲೆ 1 ಕೋಟಿ ರೂ, ಮಾರಾಟ ಮಾಡಲಿಲ್ಲ, ಮಾಲೀಕ,

ರಾಜಸ್ಥಾನ : ಇಲ್ಲೊಂದು  ಕುರಿಗೆ ಹರಾಜಲ್ಲಿ 1 ಕೋಟಿ ರೂ. ಬೃಹತ್‌ ಮೊತ್ತಕ್ಕೆ ಬಿಡ್‌ ಆಗಿದೆ. ಆದರೂ, ರಾಜಸ್ಥಾನದ ಕುರಿಗಾಹಿಯೊಬ್ಬ ತನ್ನ ಕುರಿ ಮಾರಲು ತಿರಸ್ಕರಿಸಿದ್ದಾರೆ.

ಅಂದ ಹಾಗೆ ಈ ಕುರಿಗೆ 1 ಕೋಟಿ ರೂ. ಕೊಡುವಂತಹದ್ದೇನಿದೆ ಎಂದು ನಿಮ್ಮ ಪ್ರಶ್ನೆಯಾಗಿರಬಹುದು. ಹೌದು, ಕುರಿಯ  ಹೊಟ್ಟೆಯಲ್ಲಿ ‘786’ ಎಂಬ ಅಂಕೆಗಳಿದ್ದು, ಈ ಸಂಖ್ಯೆ ಮುಸ್ಲಿಮರಿಗೆ ಅದೃಷ್ಟಶಾಲಿ ಅಂತೆ. ಅದಕ್ಕಾಗಿ ಮುಸ್ಲೀಮರು ಈ ಕುರಿ ಕೊಂಡುಕೊಳ್ಳಲು ಮುಂದಾಗಿದ್ದಾರೆ.

‘786’ ಸಂಖ್ಯೆಯನ್ನು ಮುಸ್ಲಿಮರು, ವಿಶೇಷವಾಗಿ ಭಾರತೀಯ ಉಪಖಂಡದಲ್ಲಿರುವವರು ಹೆಚ್ಚಾಗಿ ಬಳಸುತ್ತಾರೆ. ಇದು ಮುಸ್ಲಿಮರಿಗೆ ಬಹಳಷ್ಟು ಅದೃಷ್ಟಶಾಲಿ ಎನಿಸಿದರೂ, ಈ ಪ್ರಾಣಿಯು ತನಗೆ ತುಂಬಾ  ಪ್ರೀತಿಯ ಪ್ರಾಣಿ ಆಗಿರುವುದರಿಂದ ಅದನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಮಾಲೀಕ ರಾಜು ಸಿಂಗ್ ಹೇಳಿಕೊಂಡಿದ್ದಾರೆ.ಜನರು ಕುರಿಗಾಗಿ 70 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ನೀಡಲು ಮುಂದಾಗಿದ್ದಾರೆ. ಆದರೂ,  ನಾನು ಅದನ್ನು ಮಾರಾಟ ಮಾಡಲು ಸಿದ್ಧನಿಲ್ಲ ಎಂದೂ ಕುರಿಗಾಹಿ ಹೇಳಿದರು.

ಈ ಮಧ್ಯೆ, ಭಾರಿ ಬಿಡ್‌ ಕಾರಣದಿಂದ ಕುರಿ ವಿಶೇಷ ಕಾಳಜಿಯನ್ನು ಪಡೆಯುತ್ತಿದೆ. ಇದಕ್ಕೆ ದಾಳಿಂಬೆ, ಪಪ್ಪಾಯಿ, ಬಿಂದೋಲ, ರಾಗಿ ಮತ್ತು ಹಸಿರು ತರಕಾರಿಗಳನ್ನು ನೀಡಲಾಗುತ್ತಿದೆ. ಇನ್ನು, ಭದ್ರತಾ ಕಾರಣಗಳಿಗಾಗಿ ಕುರಿಯನ್ನು ತನ್ನ ಮನೆಯೊಳಗೆ ಇಡಲು ಪ್ರಾರಂಭಿಸಿದೆ ಎಂದೂ ರಾಜು ಸಿಂಗ್ ಹೇಳಿದ್ದಾರೆಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *

Most Popular

To Top