ರೈಲಿಗೆ ತಲೆಕೊಟ್ಟು ಸಾಯಲು ಹೊರಟವನ ರಕ್ಷಿಸಿದ ದಾವಣಗೆರೆಯ ಸಾರ್ವಜನಿಕರು

ರೈಲಿಗೆ ತಲೆಕೊಟ್ಟು ಸಾಯಲು ಹೊರಟವನ ರಕ್ಷಿಸಿದ
ದಾವಣಗೆರೆ: ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಸ್ಥಳದಲ್ಲಿಯೇ ಇದ್ದ ಸಾರ್ವಜನಿಕರು ರಕ್ಷಿಸಿದ ಘಟನೆ ಮಂಗಳವಾರ ಅಶೋಕ ಚಿತ್ರಮಂದಿರದ ರೈಲ್ವೇ ಗೇಟ್ ಬಳಿ ನಡೆದಿದೆ.
ಈ ಘಟನೆಯ ವೀಡಿಯೋ ಸಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ರೈಲು ನಿಲ್ದಾಣದಿಂದ ಹೊರಟಾಗ ಯುವಕನೊಬ್ಬ ಹಳಿ ಮೇಲೆ ಕುಳಿತು ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಅದನ್ನು ನೋಡಿದ ಸಾರ್ವಜನಿಕರು ಕೂಗುತ್ತಾ ಹೋಗಿ ಆತನನ್ನು ಎಳೆದು ಹೊರ ತಂದ ದೃಶ್ಯ ವೀಡಿಯೋದಲ್ಲಿದೆ.